ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 19ನೇ ಬೆಳ್ತಂಗಡಿ ಮಹಿಳಾ ಶಾಖೆ ಶುಭಾರಂಭ: ಪ್ರಕಾಶ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ಮಾಲಕಿ ಸುಮನಾ ಪುಷ್ಪರಾಜ್ ಶೆಟ್ಟಿ ಉದ್ಘಾಟನೆ

ಬೆಳ್ತಂಗಡಿ: ಗುರುವಾಯನಕೆರೆ ವಿಜಯ ಕ್ರೆಡಿಟ್ ಕೋ
ಆಪರೇಟಿವ್ ಸೊಸೈಟಿಯ 19ನೇ ಬೆಳ್ತಂಗಡಿ ಮಹಿಳಾ ಶಾಖೆ ಬೆಳ್ತಂಗಡಿ ಮಹಿಳಾ ಗ್ರಾಹಕರ ಸಹಕಾರ ಸಂಘದ ಕಟ್ಟಡದಲ್ಲಿ ಮೆ. 24ರಂದು ಉದ್ಘಾಟನೆಗೊಂಡಿತು.

ಶಾಖಾ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಉಜಿರೆಯ ಪ್ರಕಾಶ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ಮಾಲಕಿ ಸುಮನಾ ಪುಷ್ಪರಾಜ್ ಶೆಟ್ಟಿ ‘ಬೆಳ್ತಂಗಡಿಯಲ್ಲಿ ಈ ಸಂಸ್ಥೆ ಶುಭಾರಂಭಗೊಂಡಿರುವುದು ಹೆಮ್ಮೆಯ ಸಂಗತಿ, ಮಹಿಳೆಯರಲ್ಲಿ ಉಳಿತಾಯ ಮಾಡುವ ಗುಣ‌ಮತ್ತು ಮನೆಯನ್ನು ಮುನ್ನಡೆಸುವ ಶಕ್ತಿಯಿದೆ. ಆದ್ದರಿಂದ ಈ ಶಾಖೆ ಯಶಸ್ವಿಯಾಗಿ ಮುನ್ನಡೆದು ಹಲವಾರು ಶಾಖೆಗಳು ತೆರೆಯುವಂತಾಗಲಿ’ ಎಂದು ಶುಭ ಹಾರೈಸಿದರು.

ವಂದನಾ ರಾಜು ಶೆಟ್ಟಿ ಬೆಂಗತ್ಯಾರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಭದ್ರತಾ ಕೊಠಡಿಯ ಉದ್ಘಾಟನೆಯನ್ನು ಸೊಸೈಟಿಯ ಉಪಾಧ್ಯಕ್ಷ ಎಂ.ಜಿ ಶೆಟ್ಟಿ ನೆರವೇರಿಸಿದರು.

ಗಣಕ ಯಂತ್ರ ಉದ್ಘಾಟಿಸಿದ ಮಾತನಾಡಿದ ಮೂಡಾಯೂರಿನ ವಸುಧಾ ಪ್ರಶಾಂತ್ ಶೆಟ್ಟಿ ಅವರು, ಈ ಸಂಸ್ಥೆಯು ಇನ್ನಷ್ಟು ಪ್ರಗತಿ ಹೊಂದಲಿ, ಹೆಚ್ಚಿನ ಮಹಿಳೆಯರು ಬಂದು ಸಹಕರಿಸಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಸ್‌. ಜಯರಾಮ ಶೆಟ್ಟಿ ಮಾತನಾಡಿ,
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಮುಖ್ಯತೆಯ ಸಂಸ್ಥೆಯಾಗಿ ಹೊರಹೊಮ್ಮಿದೆ. ಜನತೆಯ ಸಹಕಾರದಿಂದ ಈ ಶಾಖೆಯು ಎತ್ತರದ ಮಟ್ಟಕ್ಕೆ ಬೆಳೆದು ನಿಲ್ಲಲಿ ಎಂದರು.

ನಿರ್ದೇಶಕರುಗಳಾದ ಬಾಲಕೃಷ್ಣ ಪೂಂಜ ಎಚ್, ಜಯಂತ್ ಶೆಟ್ಟಿ ಕುಂಠಿನಿ, ಅಂಬಾ ಬಿ.ಆಳ್ವ, ಎಂ.ಜಯರಾಮ್ ಭಂಡಾರಿ, ಮಂಜುನಾಥ ರೈ ನಂಜೆ,
ಸಾರಿಕಾ ಶೆಟ್ಟಿ, ಕೃಷ್ಣ ರೈ, ಗುರುವಾಯನಕೆರೆ ಶಾಖಾ
ಪ್ರಬಂಧಕ ಸಂತೋಷ್‌ , ಪ್ರಬಂಧಕ ಸಂತೋಷ್ ಶೆಟ್ಟಿ, ರಬ್ಬರ್‌ ಸೊಸೈಟಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಜು ಶೆಟ್ಟಿ, ಲ್ಯಾಲ ರಬ್ಬರ್‌ ಫ್ಯಾಕ್ಟರಿಯ ನಿವೃತ್ತ ಪ್ರಬಂಧಕ ಸಂಜೀವ ಶೆಟ್ಟಿ, ಮಹಿಳಾ ಶಾಖೆಯ ಪ್ರಬಂಧಕಿ ಅಖಿಲಾ ಆರ್‌.ಶೆಟ್ಟಿ ಉಪಸ್ಥಿತರಿದ್ದರು.

error: Content is protected !!