ಮೇ.25 ಧರ್ಮಸ್ಥಳದಲ್ಲಿ “ಹತ್ತನಾವಧಿ” ಉತ್ಸವ

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪ್ರಸಕ್ತ ವರ್ಷದ ಕೊನೆಯ ಉತ್ಸವ “ಹತ್ತನಾವಧಿ” (ಪತ್ತನಾಜೆ) ಮೇ25 ರಂದು ನಡೆಯಲಿದೆ. ಮುಂದೆ ದೀಪಾವಳಿಯವರೆಗೆ ದೇವಸ್ಥಾನದಲ್ಲಿ ರಂಗಪೂಜೆ, ಉತ್ಸವ, ಬೆಳ್ಳಿ ರಥೋತ್ಸವ ಮೊದಲಾದ ವಿಶೇಷ ಸೇವೆಗಳು ನಡೆಯುವುದಿಲ್ಲ.

ಮೇ.24 (ಇಂದು) ಸಂಜೆ 7 ಗಂಟೆಯಿಂದ ರಾತ್ರಿ 12 ಗಂಟೆವರೆಗೆ ಮುಂಡಾಜೆಯ ಭಾರ್ಗವ ಸಭಾ ಭವನದಲ್ಲಿ ಧರ್ಮಸ್ಥಳ ಮೇಳದ ಯಕ್ಷಗಾನ ಬಯಲಾಟ ನಡೆಯಲಿದೆ. ಮೇ 26, 27 ಮತ್ತು 28 ರಂದು 3 ದಿನ ಧರ್ಮಸ್ಥಳದಲ್ಲಿ ಸಂಜೆ ಗಂಟೆ 7 ರಿಂದ ರಾತ್ರಿ 12ರ ವರೆಗೆ ಯಕ್ಷಗಾನ ಬಯಲಾಟ ಪ್ರದರ್ಶನವಾದ ಬಳಿಕ ಪ್ರಸಕ್ತ ವರ್ಷದ ಬಯಲಾಟ ಪ್ರದರ್ಶನಕ್ಕೆ ಕಲಾವಿದರು ಮಂಗಳ ಹಾಡುವರು. ಮುಂದೆ, ನವೆಂಬರ್ ಬಳಿಕ ಧರ್ಮಸ್ಥಳ ಮೇಳದ ಬಯಲಾಟ ಪ್ರದರ್ಶನ ಪ್ರಾರಂಭಗೊಳ್ಳಲಿದೆ.

error: Content is protected !!