ಬೆಳ್ತಂಗಡಿ: ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ವಿರುದ್ಧ ಅವಹೇಳನಕಾರಿ ವಾಟ್ಸಾಪ್ ಸ್ಟೇಟಸ್‌ಗಳು ಹರಿದಾಡಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ರಕ್ಷಿತ್ ಶಿವರಾಂ ಅಭಿಮಾನಿ ಬಳಗ ಹಾಗೂ ಬ್ಲಾಕ್ ಮಹಿಳಾ ಕಾಂಗ್ರೆಸ್ ಬೆಳ್ತಂಗಡಿ ಘಟಕ ಇವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಬಿಜೆಪಿ ಕಾರ್ಯಕರ್ತನೊಬ್ಬ ತನ್ನ ಮೊಬೈಲ್ ವಾಟ್ಸಾಪ್ ಸ್ಟೇಟಸ್ ನಲ್ಲಿ ರಕ್ಷಿತ್ ಇವರ ಫೋಟೋ ಹಾಕಿ ‘ಓಂ ಶಾಂತಿ’ ಎಂದು ಬರೆದು ತೇಜೋವಧೆಗೆ ಯತ್ನಿಸಿದ್ದು, ಹೀಗಾಗಿ ಆರೋಪಿಯನ್ನು ಕೂಡಲೆ ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ದೂರುದಾರರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಂದನಾ ಭಂಡಾರಿ , ಕಾರ್ಯದರ್ಶಿ ಸೌಮ್ಯ ಲಾಯಿಲ , ಜೆಸಿಂತಾ ಮೋನಿಸ್ , ತಾ.ಪಂ ಸದಸ್ಯರಾದ ವಿನುಷ ಪ್ರಕಾಶ್ , ಜಯಶೀಲ ಶಿರ್ಲಾಲು , ಗೋಪಿನಾಥ್ ನಾಯಕ್ , ಕಾಂಗ್ರೆಸ್ ಮುಖಂಡರಾದ ಜಯಲಕ್ಷ್ಮೀ ಶಿರ್ಲಾಲು , ಯಶೋಧ ಕುತ್ಲೂರು , ಪ್ರಕಾಶ್ ಅಳದಂಗಡಿ , ಸಚಿನ್ ನೂಜೋಡಿ , ಸುಧೀರ್ ದೇವಾಡಿಗ , ಪೀತಂ ಶೆಟ್ಟಿ ಉಜಿರೆ , ಗೀತಾ ಬಂದಾರು , ಸುಚಿತ್ರಾ ಕೊಳ್ಳಜೆ , ಗಫೂರು ಪುದುವೆಟ್ಟು , ನೀಲಮ್ಮ ಪುದುವೆಟ್ಟು , ಮಧುರ ಮೇಲಂತಬೆಟ್ಟು , ಲಿಯೋ ಪಿರೆರಾ , ಸುರೇಶ್ ಸುವರ್ಣ , ಸಿದ್ದಿಕ್ ಮಲೆಬೆಟ್ಟು , ರಾಘವ ಗೇರುಕಟ್ಟೆ , ಪ್ರವೀಣ್ ಪೆರ್ನಾಂಡೀಸ್ , ಜಗದೀಶ್ ಬೆಳ್ತಂಗಡಿ ಸೇರಿದಂತೆ ಪ್ರಮುಖ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.