ಕಣಿಯೂರು ಗ್ರಾಮ ಪಂಚಾಯತ್ ಬಿಜೆಪಿ ಸದಸ್ಯೆ ಕಾಂಗ್ರೆಸ್ ಪಕ್ಷ ಸೇರ್ಪಡೆ

 

 

 

ಬೆಳ್ತಂಗಡಿ; ಕಣಿಯೂರು ಗ್ರಾಮ ಪಂಚಾಯತ್ ಬಿಜೆಪಿ ಬೆಂಬಲಿತ ಸದಸ್ಯೆ ಪ್ರಿಯಾಂಕ ರಾಧಕೃಷ್ಣ ಗೌಡ ಇವರ ವಾರ್ಡ್ ಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅನುದಾನ ಕೊಡುವುದಾಗಿ ಭರವಸೆ ನೀಡಿ ನಂತರ ಯಾವುದೇ ಅನುದಾನ ನೀಡದೆ ಕಡೆಗಣಿಸಿರುತ್ತಾರೆ. ಅಲ್ಲದೆ ನಾವು ಗ್ರಾಮದ ಯಾವುದೇ ಕೆಲಸ ಕಾರ್ಯಕ್ಕೂ ನೇರವಾಗಿ ಶಾಸಕರನ್ನು ಸಂಪರ್ಕಿಸಿದರೆ ನಮ್ಮ ಗ್ರಾಮದ ಪ್ರಭಾವಿ ವ್ಯಕ್ತಿಯೊಬ್ಬರು ನಮಗೆ ಗದರಿಸಿ ಏನೇ ಮಾತನಾಡುವುದಿದ್ದರೂ ನನ್ನ ಮೂಲಕವೇ ಮಾತನಾಡಬೇಕು ಎಂದು ಹೇಳುತ್ತಿದ್ದು ಈ ಎಲ್ಲಾ ಕಾರಣದಿಂದಾಗಿ ನನ್ನ ವಾರ್ಡ್ ನ ನನ್ನ ಬೆಂಬಲಿಗರ ಅಭಿಪ್ರಾಯದಿಂದ ನಾನು ಬಿ ಜೆ ಪಿ ಪಕ್ಷ ತೊರೆದು ಮಾಜಿ ಶಾಸಕರಾದ ಕೆ ವಸಂತ ಬಂಗೇರ ಮತ್ತು ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ರಕ್ಷಿತ್ ಶಿವರಾಮ್ ರವರ ನೇತೃತ್ವದಲ್ಲಿ ಕಾಂಗ್ರೇಸ್ ಪಕ್ಷ ಸೇರ್ಪಡೆಯಗುತ್ತಿರುವುದಾಗಿ ತಿಳಿಸಿ ಅವರು ಬಿಜೆಪಿ ಪಕ್ಷವನ್ನು ತೊರೆದು ಮೇ.7 ರಂದು ಭಾನುವಾರ ಬೆಳ್ತಂಗಡಿ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಕ್ಷಿತ್ ಶಿವರಾಂ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾದರು.

ಇದೆ ವೇಳೆ ಬಿಜೆಪಿ ಕಾರ್ಯಕರ್ತ ವಿಜಯ ನಾಯ್ಕ ಕಣಿಯೂರು ಮತ್ತು ಕಣಿಯೂರು ಬಿಜೆಪಿ ಬೂತ್ ಸಮಿತಿ ಕಾರ್ಯದರ್ಶಿ ರಾಧಕೃಷ್ಣ ಗೌಡ ಕೂಡ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಪ್ರಚಾರ ಸಮಿತಿಯ ಅಧ್ಯಕ್ಷರಾದ ಭಗಿರಥ ಜಿ,ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಈಶ್ವರ ಭಟ್ ಮಾಹಿಲ್ತೋಡಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಲೋಕೇಶ್ವರಿ ವಿನಯಚಂದ್ರ ಗೌಡ, ಪಕ್ಷದ ವಕ್ತಾರರದ ಮನೋಹರ ಕುಮಾರ್, ಇಳಂತಿಲ, ಮಾಜಿ ಪಂಚಾಯತ್ ಸದಸ್ಯರಾದ ಉಮವತಿ ದೇಜಪ್ಪ ಗೌಡ,ಉಜಿರೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ವಿನುತ ರಜತ ಗೌಡ, ಲಾಯಿಲ ಗ್ರಾಮ ಪಂಚಾಯತ್ ಸದಸ್ಯರಾದ ರೇವತಿ, ಕಣಿಯೂರು ಗ್ರಾಮ ಪಂಚಾಯತ್ ಸದಸ್ಯರಾದ ಸುಮತಿ ಶೆಟ್ಟಿ ,ಪಕ್ಷದ ಪ್ರಮುಖರಾದ ಸತೀಶ್ ಪದ್ಮುಂಜ,ಕಾಸಿಂ ಪದ್ಮುಂಜ, ಸರೋಜಿನಿ ,ಲಿಂಗಪ್ಪ ಬಂಗೇರ, ಚಂದ್ರಕಾಂತ ಹಾಗೂ ಪ್ರಮುಖರು ಉಪಸ್ಥಿತರಿದ್ದರು

error: Content is protected !!