ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ, ಚುನಾವಣೆಗೆ ಬಿಜೆಪಿ ಪೂರ್ವ ತಯಾರಿ: 3 ದಿನದಲ್ಲಿ 65ಕ್ಕೂ ಅಧಿಕ ಶಕ್ತಿ ಕೇಂದ್ರಗಳ ಸಭೆ ನಡೆಸಿದ ಶಾಸಕ ಹರೀಶ್ ಪೂಂಜ: ನಿರೀಕ್ಷೆಗೂ ಮೀರಿ ಜನ ಬೆಂಬಲ, ಹಲವಾರೂ ಮಂದಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ:

 

 

ಬೆಳ್ತಂಗಡಿ: ಬಿಜೆಪಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಹಾಗೂ ಶಾಸಕ ಹರೀಶ್‌ ಪೂಂಜ  ತಾಲ್ಲೂಕಿನಾದ್ಯಂತ ಸಂಘಟನಾತ್ಮಕ ಪ್ರವಾಸ ಕೈಗೊಂಡಿದ್ದು, ಬಿಜೆಪಿ ಮಂಡಲ ಪದಾಧಿಕಾರಿಗಳೊಂದಿಗೆ ಮುಂಬರುವ ಚುನಾವಣೆಯ ಪೂರ್ವಭಾವಿ ಸಭೆ ನಡೆಸಿದರು. ಎ 12 ರಿಂದ 14 ವರೆಗೆ 65 ಕ್ಕೂ ಅಧಿಕ ಶಕ್ತಿ ಕೇಂದ್ರಗಳಿಗೆ ಭೇಟಿ ನೀಡಿದರು. ಎ 12 ರಂದು ಬೆಳಿಗ್ಗೆ
ನಾರಾವಿ ಶ್ರೀ ಸೂರ್ಯನಾರಾಯಣ ದೇವರಿಗೆ ಪೂಜೆ ಸಲ್ಲಿಸಿ ನಾರಾವಿ , ಕುತ್ಲೂರು, ಸುಲ್ಕೇರಿ, ಕೊಕ್ರಾಡಿ, ಅಂಡಿಂಜೆ, ಸಾವ್ಯ, ಪೆರಾಡಿ, ಮರೋಡಿ, ಕಾಶಿಪಟ್ಣ, ಬಡಕೊಡಿ, ಹೊಸಂಗಡಿ, ಆರಂಬೋಡಿ, ವೇಣೂರು, ಕರಿಮಣೇಲು, ಮೂಡುಕೋಡಿ, ಕುಕ್ಕೇಡಿ, ನಿಟ್ಟಡೆ, ಗರ್ಡಾಡಿ, ಪಿಲ್ಯ, ಕುದ್ಯಾಡಿ, ನಾವರ, ಪಡಂಗಡಿ, ನಾಲ್ಕೂರು, ಬಜಿರೆ, ತೆಂಕಕಾರಂದೂರು, ಬಡಗಕಾರಂದೂರು ಶಕ್ತಿ ಕೇಂದ್ರಗಳ ಸಭೆ ನಡೆಸಿದರು.

 

 

ದಿನಾಂಕ ಎ 13 ರಂದು ಶಿಬಾಜೆ, ಅರಸಿನಮಕ್ಕಿ, ಶಿಶಿಲ, ರೆಖ್ಯಾ, ಗುಂಡೂರಿ, ಪಟ್ರಮೆ, ಕೊಕ್ಕಡ, ಕಳೆಂಜ, ನಿಡ್ಲೆ, ಪುದುವೆಟ್ಟು ,ನೆರಿಯ, ಚಿಬಿದ್ರೆ ತೊಟತ್ತಾಡಿ, ಚಾರ್ಮಾಡಿ, ಮುಂಡಾಜೆ, ಉಜಿರೆ, ಕಲ್ಮಂಜ, ಕಡಿರುದ್ಯಾವರ, ಮಿತ್ತಬಾಗಿಲು , ಮಲವಂತಿಗೆ ,ಇಂದಬೆಟ್ಟು, ನಾವೂರು ಶಕ್ತಿ ಕೇಂದ್ರಗಳ ಸಭೆ ನಡೆಸಿದರು.

 

 

ಎ14. ರಂದು ಸೋಣಂದೂರು, ಮಾಲಾಡಿ, ಕುಕ್ಕಳ, ಧರ್ಮಸ್ಥಳ, ಕನ್ಯಾಡಿ,ನಡ, ಲಾಯಿಲ, ಕೊಯ್ಯೂರು, ಬೆಳಾಲು, ಪಾರೆಂಕಿ, ಮಚ್ಚಿನ, ತಣ್ಣೀರುಪಂಥ, ಪುತ್ತಿಲ, ಬಾರ್ಯ ಶಕ್ತಿ ಕೇಂದ್ರಗಳ ಸಭೆ ನಡೆಸಿದರು.ಸಭೆಯಲ್ಲಿ ಶಾಸಕ ಹರೀಶ್‌ ಪೂಂಜ ಅವರು ಸಂಘಟನಾತ್ಮಕ ಪ್ರವಾಸ ಕೈಗೊಂಡು ಪಕ್ಷವನ್ನು ಅತ್ಯಂತ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದರು. ಶಕ್ತಿ ಕೇಂದ್ರಗಳ ಸಭೆಗಳ ಸಂದರ್ಭಗಳಲ್ಲಿ ಇತರೇ ಪಕ್ಷಗಳ ಅನೇಕ ಕಾರ್ಯಕರ್ತರು, ನಾಯಕರು ಶಾಸಕ ಹರೀಶ್‌ ಪೂಂಜ ಕಳೆದ 5 ವರ್ಷಗಳಲ್ಲಿ ನಡೆಸಿದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಹಾಗೂ ಬಿಜೆಪಿ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಬಿಜೆಪಿಗೆ ಸೇರ್ಪಡೆಗೊಂಡರು. ಬಡಕೋಡಿ ಗ್ರಾಮದ ರವಿ ನಾಯ್ಕ್, ಮೂಡುಕೋಡಿ ಗ್ರಾಮದ ಜಯರಾಮ್, ಸುಧಾಕರ್ ಅಲ್ಲದೇ ಹಲವರನ್ನು ಹರೀಶ್‌ ಪೂಂಜ ಹಾಗೂ ಮಂಡಲ ಅಧ್ಯಕ್ಷ ಜಯಂತ್‌ ಕೋಟ್ಯಾನ್‌ ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಂಡರು.

 

 

 

ಶಕ್ತಿ ಕೇಂದ್ರಗಳ ಸಭೆಯಲ್ಲಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಬಿಜೆಪಿ ದಕ ಜಿಲ್ಲಾ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಕೊರಗಪ್ಪ ನಾಯ್ಕ್‌, ಜಿಲ್ಲಾ ಎಸ್. ಟಿ. ಮೋರ್ಚಾ ಅಧ್ಯಕ್ಷ ಚೆನ್ನಕೇಶವ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಜೋಯಲ್ ಮೆಂಡೋನ್ಸ, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ್ ರಾವ್, ಗಣೇಶ್ ನಾವೂರು, ಉಪಾಧ್ಯಕ್ಷ ಸೀತಾರಾಮ್ ಬೆಳಾಲು, ಕೊರಗಪ್ಪ ಗೌಡ ಹಾಗೂ ಪಕ್ಷದ ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರ, ಬೂತ್ ಮಟ್ಟದ ಪದಾಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರು, ಉಪಸ್ಥಿತರಿದ್ದರು.

error: Content is protected !!