ಒಂದೇ ದಿನ ಎರಡು ಕಡೆ ಅಕ್ರಮ ಮದ್ಯ ಸಾಗಾಟ..!: ಅಬಕಾರಿ ದಳದಿಂದ ಪತ್ತೆ ಕಾರ್ಯ: 2 ಪ್ರಕರಣ ದಾಖಲು: 4 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಅಧಿಕಾರಿಗಳ ವಶ..!

ಬೆಳ್ತಂಗಡಿ : ಎರಡು ಕಾರಿನಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಬೆಳ್ತಂಗಡಿ ಅಬಕಾರಿ ದಳದವರು ಪತ್ತೆ ಹಚ್ಚಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚುನಾವಣಾ ಪೂರ್ವ ತಯಾರಿಯ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನಲ್ಲೂ ಅಕ್ರಮ ಕಾರ್ಯಗಳು ಆರಂಭವಾಗಿದೆ. ಉಜಿರೆ ಗ್ರಾಮದ ನೀರಚಿಲುಮೆ ಎಂಬಲ್ಲಿ ಅಬಕಾರಿ ದಳದವರು ಖಚಿತ ಮಾಹಿತಿ ಮೇರೆಗೆ ಎ.10 ರಂದು ಓಮಿನಿ ವಾಹನದಲ್ಲಿ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ 8.640 ಲೀಟರ್ ಮದ್ಯವನ್ನು ಪತ್ತೆ ಹಚ್ಚಿದ್ದಾರೆ. ಈ ವೇಳೆ  ಅಧಿಕಾರಿಗಳು 1,53,360 ರೂಗಳ ಓಮಿನಿ ವಾಹನ ಹಾಗೂ ಮದ್ಯ ವಶಪಡಿಸಿಕೊಂಡಿದ್ದಾರೆ.

ಬೆಳ್ತಂಗಡಿ ಕಸಬದ ಕೆಲ್ಲಗುತ್ತು ಎಂಬಲ್ಲಿ ಮಾರುತಿ ರಿಟ್ಜ್ ಕಾರಿನಲ್ಲಿ ಅಕ್ರಮವಾಗಿ 17.280 ಲೀಟರ್ ಮದ್ಯ ಸಾಗಾಟ ಮಾಡುತ್ತಿದ್ದವರನ್ನು ಪತ್ತೆ ಹಚ್ಚಿದ ಅಧಿಕಾರಿಗಳು 3,31,720 ರೂ. ಮೌಲ್ಯದ ಕಾರು ಮತ್ತು ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.  ಆರೋಪಿಗಳು ಪರಾರಿಯಾಗಿದ್ದಾರೆ.

ಈ ಎರಡು ಅಕ್ರಮ ಮದ್ಯ ಸಾಗಾಟ ಪತ್ತೆ ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ಅಬಕಾರಿ ನಿರೀಕ್ಷಕರಾದ ನವೀನ್ ಕುಮಾರ್ , ಅಬಕಾರಿ ಉಪನಿರೀಕ್ಷಕ ಸಯ್ಯದ್ ಶಬೀರ್ ಹಾಗೂ ಸಿಬ್ಬಂದಿಗಳಾದ ಶವಶಂಕ್ರಪ್ಪ , ಬೋಜ.ಕೆ , ವಿನೊಯ್.ಸಿ.ಜೆ ಮತ್ತು ವಾಹನ ಚಾಲಕ ನವೀನ್ ಕುಮಾರ್ ಭಾಗವಹಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!