‘ಸಂವಿಧಾನವನ್ನು ಒಂದೇ ಬಾರಿ ಬದಲಾಯಿಸಲು ಸಾಧ್ಯವಿಲ್ಲವೆಂದು ಹಂತ ಹಂತವಾಗಿ ದುರ್ಬಲಗೊಳಿಸುತ್ತಿದ್ದಾರೆ: ದೇಶಾದ್ಯಂತ ದಲಿತರು ರಕ್ತ ಚೆಲ್ಲಿಯಾದರೂ  ಅದನ್ನು ತಡೆಯುವ ಸಾಮರ್ಥ್ಯ ಹೊಂದಿದ್ದಾರೆ: ಸಜ್ಜನ, ಜನಸೇವೆ ಮಾಡಲು ರಮಾನಾಥ ರೈ ಯೋಗ್ಯ ನಾಯಕ : ಎಲ್. ಹನುಮಂತಯ್ಯ

ಬಂಟ್ವಾಳ : ಯಾವ ಸಂವಿಧಾನ ನಮ್ಮನ್ನು ರಕ್ಷಿಸುತ್ತಿದೆಯೋ ಅಂತಹ ಸಂವಿಧಾನವನ್ನು ಬದಲಾಯಿಸುವ ಬಗ್ಗೆ ಬಿಜೆಪಿಗರು ಚಿಂತಿಸುತ್ತಿದ್ದಾರೆ. ದೇಶಾದ್ಯಂತ ದಲಿತರು ರಕ್ತ ಚೆಲ್ಲಿಯಾದರೂ  ಅದನ್ನು ತಡೆಯುವ ಸಾಮರ್ಥ್ಯ ಹೊಂದಿದ್ದಾರೆ. ಸಂವಿಧಾನವನ್ನು  ಒಂದೇ ಬಾರಿ ಬದಲಾಯಿಸಲು ಸಾಧ್ಯವಿಲ್ಲವೆಂದು, ಹಂತ ಹಂತವಾಗಿ ದುರ್ಬಲಗೊಳಿಸುತ್ತಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ. ರಮಾನಾಥ ರೈ ಸಜ್ಜನರು, ಜನಸೇವೆ ಮಾಡಲು ಯೋಗ್ಯವಾದ ಜನನಾಯಕರು ಎಂದು ರಾಜ್ಯಸಭಾ ಸದಸ್ಯ ಡಾ. ಎಲ್. ಹನುಮಂತಯ್ಯ ಹೇಳಿದ್ದಾರೆ.

ಬಂಟ್ವಾಳ ಕಾಂಗ್ರೆಸ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಘಟಕಗಳ ವತಿಯಿಂದ ಬಿ.ಸಿ.ರೋಡ್ ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಐಕ್ಯತಾ ಸಮಾವೇಶದ ದಿಕ್ಸೂಚಿ ಭಾಷಣ ಮಾಡುತ್ತಾ ಸಾಕಷ್ಟು ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಮೂಲಕ ಪರಿಶಿಷ್ಟ ಸಮುದಾಯಗಳು, ಹಿಂದುಳಿದ ವರ್ಗಗಳ ಮೀಸಲಾತಿ ನಾಶವಾಗುತ್ತಿದೆ. ಇದರಿಂದ ದೊಡ್ಡ ಅನ್ಯಾಯವಾಗುತ್ತಿದೆ, ಇದನ್ನು ತಡೆಯಲು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ ಸಮಾನತೆ, ಸ್ವಾತಂತ್ರ‍್ಯ, ಸಹೋದರತೆಯ ಮೌಲ್ಯಗಳ ಮೂಲಕ ಸಂವಿಧಾನ ನಮಗೆ ಘನತೆಯನ್ನು ನೀಡಿದೆ. ಅಂತಹ ಸಂವಿಧಾನದಡಿ ಸಾಕಷ್ಟು ಕಾನೂನುಗಳನ್ನು ಮಾಡಿ ದೇಶದ ಪ್ರಗತಿಯಲ್ಲಿ ಕಾಂಗ್ರೆಸ್ ದೊಡ್ಡ ಕೊಡುಗೆಗಳನ್ನು ನೀಡಿದೆ. ಕಾಂಗ್ರೆಸ್‌ಅನ್ನು ಗೆಲ್ಲಿಸಿದರೆ ಮಾತ್ರ ಸಂವಿಧಾನದ ಗೌರವವನ್ನು ಕಾಪಾಡಲು ಸಾಧ್ಯ ಮತ್ತು ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಲು ಸಾಧ್ಯ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿ. ರಮಾನಾಥ ರೈ ಅವರು ನನ್ನ ನಡವಳಿಕೆಗಳನ್ನು ಕಂಡಿದ್ದೀರಿ. ಎಲ್ಲಾ ವರ್ಗಗಳ ಜನರನ್ನು ಜೊತೆಯಾಗಿ ಕೊಂಡೊಯ್ದು ಸೇವೆ ಸಲ್ಲಿಸಿದ್ದೇನೆ. ಅಧಿಕಾರ ಇದ್ದಾಗಲೂ, ಇಲ್ಲದಿದ್ದಾಗಲೂ ದುರ್ಬಲರ ಜೊತೆ ಕೆಲಸ ಮಾಡಿದ್ದೇನೆ. ದಕ್ಷಿಣ ಕನ್ನಡ ಜಿಲ್ಲೆಯ ದಲಿತರ ಬಹುಬೇಡಿಕೆಯಾದ ಡಿ.ಸಿ. ಮನ್ನಾ ಭೂಮಿ ಸಮಸ್ಯೆ ನಿವಾರಣೆಗೆ ಕಾಂಗ್ರೆಸ್ ಬದ್ಧವಾಗಿದೆ. ಈ ಬಗ್ಗೆ ಪಕ್ಷದ ಪ್ರಣಾಳಿಕೆಯಲ್ಲಿಯೂ ಸೇರ್ಪಡೆಗೊಳಿಸಲಾಗಿದೆ. ಮುಂದಿನ ಬಾರಿ ನಮ್ಮ ಸರಕಾರ ಬಂದಾಗ ಈ ಬಗ್ಗೆ ಸೂಕ್ತ ಕಾನೂನು ರಚಿಸಿ ಸಮಸ್ಯೆ ಪರಿಹರಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಹರೀಶ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಶೇಖರ್ ಕುಕ್ಕೇಡಿ, ಪರಿಶಿಷ್ಟ ಪಂಗಡ ವಿಭಾಗದ ಜಿಲ್ಲಾಧ್ಯಕ್ಷ ನಾರಾಯಣ ನಾಯ್ಕ್, ರಾಜ್ಯ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಆರ್. ಧರ್ಮಸೇನ, ಕೆ.ಪಿ.ಸಿ.ಸಿ ಸದಸ್ಯ ಡಾ. ರಘು, ದ.ಕ. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸೋಮನಾಥ, ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಸಂಚಾಲಕಿ ಸರೋಜಿನಿ, ಮಹಾನಗರ ಪಾಲಿಕೆ ಮಾಜಿ ಕಾರ್ಪೊರೇಟರ್ ಅಪ್ಪಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಜಯ ಕುಮಾರ್, ಬಂಟ್ವಾಳ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಉಮೇಶ್ ಸಪಲ್ಯ, ಐಕ್ಯತಾ ಸಮಾವೇಶದ ಸಂಚಾಲಕರುಗಳಾದ ಪಿಯುಸ್ ಎಲ್. ರಾಡ್ರಿಗಸ್, ಎಂ.ಎಸ್. ಮುಹಮ್ಮದ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಬಂಟ್ವಾಳ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಅಣ್ಣು ಖಂಡಿಗ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಪಂಗಡ ವಿಭಾಗದ ಅಧ್ಯಕ್ಷ ಚನ್ನಪ್ಪ ನಾಯ್ಕ್, ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಪ್ರೀತಮ್ ರಾಜ್ ದ್ರಾವಿಡ, ಬಂಟ್ವಾಳ ಕಾಂಗ್ರೆಸ್ ಪರಿಶಿಷ್ಟ ಪಂಗಡ ವಿಭಾಗದ ಅಧ್ಯಕ್ಷ ಚಂದ್ರಹಾಸ ನಾಯ್ಕ್, ಪಕ್ಷದ ಪ್ರಮುಖರುಗಳಾದ ಕೆ.ಪಿ.ಸಿ.ಸಿ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯ ಪದ್ಮಶೇಖರ ಜೈನ್, ಪುತ್ತೂರು ಕಾಂಗ್ರೆಸ್ ಪರಿಶಿಷ್ಟ ಪಂಗಡ ವಿಭಾಗದ ಅಧ್ಯಕ್ಷ ಮಹಾಲಿಂಗ ನಾಯ್ಕ್, ಕೆಪಿಸಿಸಿ ಸದಸ್ಯ ನಾಗರಾಜ್ ಲಾಯಿಲ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಬೀರ್ ಸಿದ್ಧಕಟ್ಟೆ, ಪ್ರಮುಖರಾದ ಪರಮೇಶ್ವರ್ ಸಾಲ್ಯಾನ್ ಕೃಷ್ಣಾಪುರ, ಅಮ್ಮು ಅರ್ಬಿಗುಡ್ಡೆ, ಜನಾರ್ಧನ ಕಳ್ಳಿಗೆ, ಶಶಿಧರ ಕಾಡುಮಠ, ಜನಾರ್ಧನ್ ಬೋಳಂತೂರು, ಶಿವಪ್ರಸಾದ್ ಬೋಳಂತೂರು, ಮಹಾಲಿಂಗ ನಾಯ್ಕ್, ಕೇಶವ ನಾಯ್ಕ್, ವೆಂಕಪ್ಪ ಪರವ, ರಾಘವೇಂದ್ರ ನಲಿಕೆ, ಗ್ರಾ. ಪಂ. ಸದಸ್ಯೆ ಸೌಮ್ಯಾ, ಸತೀಶ್ ಅರಳ, ಬೂಬ ಪರವ ಪಿಲಿಮೊಗರು, ವೆಂಕಪ್ಪ ಕೆದ್ದಲಿಕೆ, ಮೊಂಟ ಕಜೆಕಾರು, ಸುನಂದ ಮಣಿನಾಲ್ಕೂರು, ಜಯಂತಿ ಮಣಿನಾಲ್ಕೂರು, ಗಿರಿಜಾ ಕನ್ಯಾನ, ಶ್ರೀಧರ್ ಮೊಗೇರಗುಡ್ಡೆ, ಸಂಗಬೆಟ್ಟು, ಚಂದು ಮಂಚಿ, ಆನಂದ ಮಾಣಿ, ಮೊನ್ನಪ್ಪ ನಿನ್ನಿಪಡ್ಪು, ಕಮಲ ತುಂಬೆ, ಬೇಬಿ ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ನಿತಿನ್ ಕುಲಾಲ್ ಅಲ್ಲಿಪಾದೆ, ಸೀತಾರಾಮ ಪೂಜಾರಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು.

ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜನಾರ್ಧನ ಚೆಂಡ್ತಿಮಾರ್ ಪ್ರಸ್ತಾವನೆ ಮಾಡಿದರು. ಸುರೇಶ್ ಪಿ. ಬಿ. ಸ್ವಾಗತಿಸಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಪಂಗಡ ವಿಭಾಗದ ಅಧ್ಯಕ್ಷ ಚಂದ್ರಹಾಸ ನಾಯ್ಕ್ ಧನ್ಯವಾದ ನೀಡಿದರು. ಚಂದ್ರಪ್ಪ ಮಾಸ್ತರ್ ನಿರೂಪಿಸಿದರು.

error: Content is protected !!