ಬೆಳ್ತಂಗಡಿ ಉರುಳಿ ಬಿದ್ದ ಬೃಹತ್ ಗಾತ್ರದ ಮರ:ತಪ್ಪಿದ ಭಾರೀ ಅನಾಹುತ:

 

ಬೆಳ್ತಂಗಡಿ:  ಹಗಲು ಹೊತ್ತಿನಲ್ಲೇ ದೊಡ್ಡ ಗಾತ್ರದ ಮರವೊಂದು ಏಕಾಏಕೀ  ಉರುಳಿ ಬಿದ್ದ ಘಟನೆ ಬೆಳ್ತಂಗಡಿಯ ಹಳೇಕೋಟೆ ಬಳಿ‌ ಸೋಮವಾರ ಸಂಜೆ ನಡೆದಿದೆ.
ಹಳೇ ಕೋಟೆ ಬಳಿಯ ರಾಷ್ಟ್ರೀಯ ಹೆದ್ದಾರಿ ಬಳಿ ಏಕಾಏಕಿ ಮರ ಉರುಳಿ ಬಿದ್ದಿದೆ. ಅಷ್ಟೊಂದು ದೊಡ್ಡ ಗಾಳಿ ಇರದಿದ್ದರೂ ಮರ ಬಿದಿದ್ದು. ಒಂದು ವೇಳೆ ಮರ ಹೆದ್ದಾರಿಗೆ ಬೀಳುತಿದ್ದರೆ ದೊಡ್ದ ಅನಾಹುತ ಸಂಭವಿಸುತಿತ್ತು. ಅದಲ್ಲದೇ ಸೋಮವಾರವಾದ್ದರಿಂದ ವಾಹನ ದಟ್ಟನೆಯೂ ಅಧಿಕವಾಗಿತ್ತು. ಅದೃಷ್ಟವಶಾತ್ ಮರ ಇನ್ನೊಂದು ಬದಿಗೆ ಉರುಳಿ ಬಿದ್ದ ಪರಿಣಾಮ ಯಾವುದೇ ಅನಾಹುತ ಸಂಭವಿಸಿಲ್ಲ ಮರ ಬಿದ್ದ ತಕ್ಷಣ ಬೆಳ್ತಂಗಡಿ ಅರಣ್ಯ ಇಲಾಖೆಯವರು ಮರ ತೆರವು ಗೊಳಿಸಿದರು.

error: Content is protected !!