ವಿಧಾನ ಸಭಾ ಚುನಾವಣೆ 2023: ಬೆಳ್ತಂಗಡಿಗೆ ಬಂದಿಳಿದ ಮತ ಪೆಟ್ಟಿಗೆ ಯಂತ್ರ: ಸೂಕ್ತ ಭದ್ರತೆಯ ಮೂಲಕ ಉಜಿರೆಯಲ್ಲಿ ಶೇಖರಣೆ:

 

 

 

 

ಬೆಳ್ತಂಗಡಿ :ವಿಧಾನ ಸಭಾ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದ್ದು ಮೇ 10 ರಂದು  ಒಂದೇ ಹಂತದಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ಈಗಾಗಲೇ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಯೋಜನೆಗಳನ್ನು ಮಾಡಿಕೊಳ್ಳುತ್ತಿರುವುದು ಒಂದೆಡೆಯಾದರೆ ಮುಂಬರುವ ಚುನಾವಣೆಗೆ ಎಲ್ಲಾ ಸಿದ್ಧತೆಗಳನ್ನು ಚುನಾವಣಾ ಆಯೋಗ ಸಿದ್ಧ ಪಡಿಸುತಿದ್ದು ಈಗಾಗಲೇ ಚುನಾವಣಾ ಮತ ಯಂತ್ರಗಳು ಬೆಳ್ತಂಗಡಿಗೆ ಇವತ್ತು ಬಂದಿಳಿದಿದೆ.

 

 

 

290 ಬ್ಯಾಲೆಟ್ ಯೂನಿಟ್, 290 ಕಂಟ್ರೊಲ್ ಯೂನಿಟ್ ಹಾಗೂ 314 ಇವಿ ಪ್ಯಾಡ್ ಸೇರಿದಂತೆ 894 ಇವಿಎಂ ಮೆಷಿನ್ ಗಳನ್ನು ಹೊತ್ತ ಕಂಟೈನರ್ ಪೊಲೀಸ್ ಭದ್ರತೆ ಹಾಗೂ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಉಪಚುನಾವಣಾಧಿಕಾರಿ, ಹಾಗೂ ಬೆಳ್ತಂಗಡಿ ತಹಶೀಲ್ದಾರ್ ಅವರ ಉಸ್ತುವಾರಿಯಲ್ಲಿ  ಮಂಗಳೂರು ಜಿಲ್ಲಾಧಿಕಾರಿ ಕಚೇರಿಯಿಂದ ಉಜಿರೆಗೆ ಸಂಜೆ ಆಗಮಿಸಿದೆ. ಅದನ್ನು ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ಎರಡು  ಭದ್ರತಾ ಕೊಠಡಿಯಲ್ಲಿ ಸೂಕ್ತ ಬಂದೋಬಸ್ತಿನಲ್ಲಿ ಶೇಖರಣೆ ಮಾಡಲಾಗಿದೆ.

error: Content is protected !!