ಕ್ಷೀಣಿಸಿದ ಧರ್ಮಸ್ಥಳ ನೇತ್ರಾವತಿ ನದಿ ನೀರಿನ ಹರಿವು: ಅಂಗಡಿಗಳಲ್ಲಿ ಸೋಪು, ಶಾಂಪೂ ಮಾರಾಟ ಮಾಡದಂತೆ ನೋಟಿಸ್:ನೀರು ಮಲಿನ ತಡೆಯಲು ಕ್ರಮ

ನೇತ್ರಾವತಿ: ಸುಡುಬಿಸಿಲಿಗೆ ನೇತ್ರಾವತಿ ನದಿ ನೀರಿನ ಹರಿವು ಕಡಿಮೆಯಾಗಿರುವ ಕಾರಣ ನೀರು ಮಲಿನವಾಗುವುದನ್ನು ತಡೆಯಲು ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದಲ್ಲಿ ಸಾಬೂನು, ಶಾಂಪೂಗಳ ಮಾರಾಟ, ಬಳಕೆಯನ್ನು ನಿಷೇಧಿಸಲಾಗಿದೆ.

ಈ ಕುರಿತು ಧರ್ಮಸ್ಥಳ ಗ್ರಾಮ ಪಂಚಾಯತ್ ಸಭೆಯಲ್ಲಿ ನಿರ್ಣಯ ಕೈಗೊಂಡು ನದಿಸುತ್ತಲಿನ ಅಂಗಡಿಗಳಲ್ಲಿ ಸೋಪು, ಶಾಂಪೂ ಮಾರಾಟ ಮಾಡದಂತೆ ನೋಟಿಸ್ ಕಳುಹಿಸಲಾಗಿದೆ. ಜೊತೆಗೆ ಸ್ವಚ್ಛತೆ ಕಾಪಾಡುವಂತೆ ಧರ್ಮಸ್ಥಳ ಕ್ಷೇತ್ರದ ವತಿಯಿಂದ ನಿತ್ಯ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಹೀಗಿದ್ದರೂ ಯಾತ್ರಾರ್ಥಿಗಳು ನದಿಯಲ್ಲಿ ಹಳೆಯ ಬಟ್ಟೆಗಳನ್ನು, ಶಾಂಪು, ಸೋಪ್, ಪ್ಲಾಸ್ಟಿಕ್ ಗಳನ್ನು ಎಸೆಯುತ್ತಿದ್ದು ಈ ಬಗ್ಗೆ ಪಂಚಾಯತ್ ವತಿಯಿಂದಲೂ ಜಾಗೃತಿ ಮೂಡಿಸಲಾಗುತ್ತಿದೆ.

error: Content is protected !!