ಎ.ಸಿ. ಅಳವಡಿಕೆ ವೇಳೆ ಕಟ್ಟಡದಿಂದ ಬಿದ್ದು ಬಂಟ್ವಾಳದ ಯುವಕ ಸಾವು: ಮಂಗಳೂರಿನ ನಂತೂರು ಬಳಿ ಘಟನೆ:

 

 

ಮಂಗಳೂರು: ಹೊಸ ಎ.ಸಿ. ಅಳವಡಿಸುವ ವೇಳೆ ಬಹುಮಹಡಿ ಕಟ್ಟಡದಿಂದ ಬಿದ್ದು ಯುವಕನೊಬ್ಬ ಸಾವನ್ನಪ್ಪಿದ ಘಟನೆ ಮಂಗಳೂರಿನ‌ ನಂತೂರಿನಲ್ಲಿ ನಡೆದಿದೆ. ಮೃತ ಯುವಕನನ್ನು ಬಂಟ್ವಾಳ ತಾಲೂಕಿನ ಮಣಿಹಳ್ಳ ನಿವಾಸಿ ವಿನಯ್ ತಾವ್ರೋ(23) ಕೆಲಸ ನಿರ್ವಹಿಸುತಿದ್ದ ಸಂದರ್ಭ 9ನೇ ಮಹಡಿಯಿಂದ ಆಕಸ್ಮಿಕವಾಗಿ ಆಯತಪ್ಪಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ವಿನಯ್ ತಾವ್ರೋ ನಂತೂರಿನ ರೆಫ್ರಿಜರೇಟರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇವರು ಮಾ 29 ರಂದು ನಂತೂರಿನಲ್ಲಿರುವ ಮೌಂಟ್ ಟಿಯಾರಾ ಅಪಾರ್ಟ್ ಮೆಂಟ್ ನಲ್ಲಿ ಗ್ರಾಹಕರೊಬ್ಬರಿಗೆ ಹೊಸ ಎಸಿ ಅಳವಡಿಸಲು ತೆರಳಿದ್ದರು. ಈ ಅಪಾರ್ಟ್​ಮೆಂಟ್​ನ 9ನೇ ಮಹಡಿಯ ಮನೆಯ ಗೋಡೆಯ ಹೊರಭಾಗದಲ್ಲಿ ವಿನಯ್ ತಾವ್ರೋ ಹಾಗೂ ಮತ್ತೋರ್ವ ಯುವಕ ಎಸಿ ಮೆಷಿನ್ ಫಿಟ್ ಮಾಡುತ್ತಿದ್ದರು. ಈ ವೇಳೆ ವಿನಯ್ ಏಕಾಏಕಿ ಆಯತಪ್ಪಿ ಮಹಡಿಯಿಂದ ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾರೆ. ವಿನಯ್ ಇತ್ತೀಚೆಗಷ್ಟೇ ಎಸಿ ಕಂಪನಿಗೆ ಕೆಲಸಕ್ಕೆಂದು ಸೇರಿದ್ದರು ಎಂದು ತಿಳಿದುಬಂದಿದೆ.

error: Content is protected !!