ಧರ್ಮಸ್ಥಳ :ಲಾರಿ ಬೈಕ್ ಡಿಕ್ಕಿ ಓರ್ವ ಸಾವು :ಮತ್ತೋರ್ವ ಗಂಭೀರ

 

 

 

 

ಬೆಳ್ತಂಗಡಿ: ಬೈಕಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿ ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ಧರ್ಮಸ್ಥಳ ಸಮೀಪದ ಮುಂಡ್ರುಪ್ಪಾಡಿ ಎಂಬಲ್ಲಿ‌ ನಡೆದಿದೆ.

ಬೆಳ್ತಂಗಡಿ ಸರ್ವೆ ಇಲಾಖೆಯ ಸರ್ವೆ ಇದ್ದ ಕಾರಣ ಕರ್ತವ್ಯ ಮುಗಿಸಿ ವಾಪಸ್ ಅಗುವ ಸಂದರ್ಭ ಮುಂಡ್ರುಪಾಡಿಯಲ್ಲಿ ಲಾರಿ ಬೈಕ್ ಗೆ ಡಿಕ್ಕಿ ಹೊಡೆದಿದ್ದು ಈ ವೇಳೆ ಬೈಕ್ ನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯವಾಗಿದ್ದು ತಕ್ಷಣ ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಬೈಕ್ ಸವಾರ ಗುರುವಾಯನಕೆರೆ ನಿವಾಸಿ ಪ್ರಸಾದ್ ಶೆಟ್ಟಿ(27) ಸಾವನ್ನಪ್ಪಿದ್ದು , ಸಹಸವಾರ ಸರ್ವೆಯರ್ ವಿಶ್ವನಾಥ್ ಗಂಭೀರ ಗಾಯಗೊಂಡಿದ್ದು ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ‌.

ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.

error: Content is protected !!