ದೈವರಾಧನೆಗೆ  ಗೃಹ ಸಚಿವರಿಂದ  ಅಪಮಾನ ಗುಳಿಗ ದೈವದ ಸನ್ನಿಧಿಯಲ್ಲಿ   ಕ್ಷಮೆಯಾಚಿಸಬೇಕು ತಾಲೂಕು ನಲಿಕೆ ಸಮಾಜ ಸೇವಾ ಸಂಘದಿಂದ ಒತ್ತಾಯ:

 

 

ಬೆಳ್ತಂಗಡಿ; ರಾಜ್ಯ ಸರಕಾರದ ಗೃಹವ ಸಚಿವರಾದ ಅರಗ ಜ್ಞಾನೇಂದ್ರ ಅವರು ತುಳುನಾಡಿನ ಆರಾಧನೆ ಗುಳಿಗ ದೈವಕ್ಕೆ ಅಪಮಾನಮಾಡುವ ಕಾರ್ಯವನ್ನು ಮಾಡಿದ್ದಾರೆ ಜಪಾನ್  ಗುಳಿಗೆ ಎಂದು ಹೇಳುವ ಮೂಲಕ ಅವರು ಇಡೀ ತುಳುನಾಡಿನ ದೈವಾರಾಧನೆಯನ್ನು ಅಪಮಾನಿಸುವ ಕಾರ್ಯ ಮಾಡಿದ್ದಾರೆ. ಗೃಹ ಸಚಿವರು ಗುಳಿಗ ದೈವದ ಸನ್ನಿಧಿಯಲ್ಲಿ ಬಂದು ಕ್ಷೆಮೆ ಕೇಳುವ ಕಾರ್ಯವನ್ನು ಮಾಡಬೇಕು ಎಂದು ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್. ಪ್ರಭಾಕರ ಶಾಂತಿಕೋಡಿ ಒತ್ತಾಯಿಸಿದರು.
ಅವರು ಬೆಳ್ತಂಗಡಿ ಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅರಗ ಜ್ಞಾನೇಂದ್ರ ಅವರು ಉದ್ದೇಶ ಪೂರ್ವಕವಾಗಿಯೇ ದೈವ ನಿಂದನೆ ಮಾಡಿದ್ದಾರೆ. ಅವರು ದೈವದ ಮುಂದೆಯೇ ಬಂದು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಅದೇರೀತಿ ಬಿಜೆಪಿ ಮುಖಂಡ ಸಿ.ಟಿ ರವಿ ಅವರು ತುಳುನಾಡಿನ ದೈವಗಳೆಲ್ಲವೂ ಬಿಜೆಪಿ ಪರ ಎಂದು ಸಭೆಯಲ್ಲಿ ಹೇಳಿಕೆ ನೀಡಿರುವುದು ಸರಿಯಲ್ಲ ಅವರು ಈಬಗ್ಗೆ ಕ್ಷಮೆ ಕೇಳಬೇಕು
ಈ ಬಗ್ಗೆ ಕ್ಷಮೆ ಕೇಳದೆ ಇದ್ದಲ್ಲಿ ಮುಂದೊನ ದಿನಗಳಲ್ಲಿ ಅರಗ ಜ್ಞಾನೇಂದ್ರ ಹಾಗೂ ಸಿ.ಟಿ ರವಿ ಭಾಗವಹಿಸುವ ಕಾರ್ಯಕ್ರಮಗಳಿಗೆ ಕಪ್ಪು ಪತಾಕೆ ಪ್ರದರ್ಶಿಸಬೇಕಾದೀತು ಎಂದು ಅವರು ಎಚ್ಚರಿಸಿದರು.
ರಾಜಕಾರಣಿಗಳು ಅನಗತ್ಯವಾಗಿ ದೈವಗಳ ವಿಚಾರವನ್ನು ಎಳೆ ತಂದು ದೈವಗಳನ್ನು ದೈವ ಕಟ್ಟುವವರನ್ನು ಅಪಮಾನಿಸುವ ಕಾರ್ಯ ಮಾಡುತ್ತ ಇದ್ದಾರೆ ಇದು ನಿಲ್ಲಬೇಕು ಈಗಾಗಲೇ ನಾಟಕ ಯಕ್ಷಗಾನ,ಸಿನಿಮಾಗಳಲ್ಲಿ ದೈವಾರಾಧನೆಯನ್ನು ಉಪಯೋಗಿಸುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಲಾಗಿದೆ, ಕೊರಗಜ್ಜನಿಗೆ ಅಪಮಾನ ಮಾಡುವ ಪ್ರಕ್ರಿಯೆಯೂ ನಿರಂತರವಾಗಿ ನಡೆಯುತ್ತಿದೆ. ಈ ಎಲ್ಲ ವಿಚಾರಗಳನ್ನು ಮುಂದಿಟ್ಟುಕೊಂಡು ದೈವಾರಾಧಕರ ಸಮಾವೇಶ ನಡೆಸಲಾಗುವುದು ಅಲ್ಲಿ ಈ ಎಲ್ಲ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.
ಸರಕಾರವೂ ಇನ್ನಾದರೂ ಈ ಬಗ್ಗೆ ಸ್ಪಷ್ಟವಾದ ಕಾನೂನನ್ನು ರೂಪಿಸುವ ಅಗತ್ಯವಿದೆ ಅದಕ್ಕೆ ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕು ಎಂದರು.
ಪಿಂಚಣಿ ನೀಡುವ ಭರವಸೆಯೂ ಈಡೇರಿಲ್ಲ; ರಾಜ್ಯ ಸರಕಾರದ ಸಚಿವರಾದ ಸುನಿಲ್ ಕುಮಾರ್ ಅವರು ದೈವ ನರ್ತಕ ಕಲಾವಿದರಿಗೆ ಪಿಂಚಣಿ ನೀಡುವುದಾಗಿ ಪ್ರಕಟಿಸಿದ್ದರು ಆದರೆ ಇದನ್ನು ಪ್ರಕಟಿಸಿ ಆರು ತಿಂಗಳಾದರೂ ಇನ್ನೂ ಯಾರಿಗೂ ಪಿಂಚಣಿ ಸಿಗಲಿಲ್ಲ ಇದು ದೈವ ನರ್ತಕರನ್ನು ಸರಕಾರ ಅವಮಾನಿಸುವುದಕ್ಕೆ ಸಮಾನಾಗಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾದ್ಯಕ್ಷ ರಾಮು ಶಿಶಿಲ, ಮಾಜಿ ಕಾರ್ಯದರ್ಶಿ ಅನಂತ ಮುಂಡಾಜೆ, ದೈವಾರಾಧನಾ ಸಮಿತಿ ಅಧ್ಯಕ್ಷ ಜನಾರ್ಧನ ಬಳ್ಳಮಂಜ, ಯುವ ವೇದಿಕೆಯ ಮಾಜಿ ಕಾರ್ಯದರ್ಶಿ ರಮೇಶ್ ಕೇಲ್ತಾಜೆ ಉಪಸ್ಥಿತರಿದ್ದರು

error: Content is protected !!