ಬೆಳ್ತಂಗಡಿ: ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮಾ.15 ರಂದು ಬೆಳ್ಳಂ ಬೆಳಗ್ಗೆ ಬೆಳ್ತಂಗಡಿ ತಾಲೂಕಿನ ಹಲವು ಭಾಗಗಳಲ್ಲಿ ತುಂತುರು ಮಳೆಯಾಗಿದೆ.
ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಕಾಣಿಸಿಕೊಂಡ ಹಿನ್ನೆಲೆ ರಾಜ್ಯದ ವಿವಿಧೆಡೆ ಮಳೆಯಾಗುವ ಸಾಧ್ಯತೆ ಇದೆ. ಮಾ.14 ರಿಂದ 18 ರವರೆಗೆ ದ.ಕ ಜಿಲ್ಲೆಯಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಅದರಂತೆ ಧರ್ಮಸ್ಥಳ, ಉಜಿರೆ, ಲಾಯಿಲ ಹಾಗೂ ಇನ್ನು ಕೆಲವೆಡೆ ತುಂತುರು ಮಳೆಯಾಗಿದ್ದು ಮುಂಡಾಜೆಯಲ್ಲಿ ಬೆಳಗ್ಗೆ 5 ಗಂಟೆಗೆ ಸುಮಾರು ಅರ್ಧತಾಸು ಉತ್ತಮ ಮಳೆಯಾಗಿದೆ. ಇನ್ನೂ 3 ದಿನ ಮಳೆಯಾಗುವ ಸಾಧ್ಯತೆ ಇದೆ.
ಬಿಸಿಯ ದಗೆ ಏರುತ್ತಿರುವ ಮಧ್ಯೆ ಬೆಳಗ್ಗೆಯೆ ತುಂತುರು ಮಳೆಯಾಗಿದ್ದು ವಾತಾವರಣ ಕೊಂಚ ತಂಪಾದಂತಾಗಿದೆ. ಕಾಡ್ಗಿಚ್ಚು ಆತಂಕ ಕಡಿಮೆಯಾಗಿದೆ. ಮಾ.14ರಂದು ಸಂಜೆ ಕೊಡಗಿನ ಕೆಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.