ಬೆಳ್ತಂಗಡಿ ತಾಲೂಕಿನ ಅಭಿವೃದ್ಧಿ ಕಾರ್ಯ ಮತ್ತಷ್ಟು ವೇಗ..!: ಒಂದೇ ದಿನ 35 ಕಡೆಗಳಲ್ಲಿ ಶಿಲಾನ್ಯಾಸ..!: ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ಹರೀಶ್ ಪೂಂಜ ಚಾಲನೆ

ಬೆಳ್ತಂಗಡಿ: ತಾಲೂಕಿನ ಅಭಿವೃದ್ಧಿಯ ದೃಷ್ಠಿಯಿಂದ ಶಾಸಕ ಹರೀಶ್ ಪೂಂಜ ನಿರಂತರವಾಗಿ ರಸ್ತೆ, ಅಣೆಕಟ್ಟು, ಸೇತುವೆ, ಸೇರಿದಂತೆ ಅನೇಕ ಕಾಮಗಾರಿಗಳಿಗೆ ಶಿಲಾನ್ಯಾಸ ನಡೆಸುತ್ತಾ, ಜೊತೆಗೆ ವಿದ್ಯುತ್, ನೀರು ಹೀಗೆ ಮೂಲಭೂತ ಸೌಕರ್ಯಗಳನ್ನು ಹಳ್ಳಿ-ಹಳ್ಳಿ ನೀಡುವ ಮಹತ್ಕಾರ್ಯವನ್ನು ಮಾಡುತ್ತಲೇ ಬಂದಿದ್ದಾರೆ. ಕಾಮಗಾರಿಗಳಿಗೆ ನಿರಂತರ ಶಿಲಾನ್ಯಾಸ ನಡೆಸಿ ಹೆಸರುವಾಸಿಯಾಗಿದ್ದ ಶಾಸಕರು ಮತ್ತೆ ಒಂದೇ ದಿನ 35 ಕಡೆಗಳಲ್ಲಿ ಶಿಲಾನ್ಯಾಸ ನಡೆಸಿ ತನ್ನ ಅಭಿವೃದ್ಧಿಗೆ ಕಾರ್ಯಗಳಿಗೆ ಮತ್ತಷ್ಟು ವೇಗ ನೀಡಿದ್ದಾರೆ.

ತಾಲೂಕಿನ 81 ಗ್ರಾಮಗಳ ರಸ್ತೆ, ನೀರು, ವಿದ್ಯುತ್ ಹೀಗೆ ಮೂಲಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಿ ಫೆ.07ರಂದು ಬೆಳಗ್ಗೆ 07 ಗಂಟೆಯಿAದಲೇ 400 ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಾಗುತ್ತಿದೆ. ಸಾವ್ಯ ಗ್ರಾಮದ ಕರೆಂಬಿಲೆಕ್ಕಿ ಎಂಬಲ್ಲಿ 2 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸೇತುವೆ ಕಾಮಗಾರಿಗೆ, 2 ಕೋಟಿ ರೂ ವೆಚ್ಚದಲ್ಲಿ ಆರಂಬೋಡಿ ಗ್ರಾಮದ ಕೂಡುರಸ್ತೆಯಿಂದ – ಗ್ರಾಮ ಪಂಚಾಯತ್ ಸಂಪರ್ಕ ರಸ್ತೆ ಮತ್ತು ಆರಂಬೋಡಿ – ಹನ್ನೆರಡುಕವಲು – ಹೊಕ್ಕಾಡಿಗೋಳಿ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ, 2.5 ಕೋಟಿ ರೂ ವೆಚ್ಚದಲ್ಲಿ ಕಾಶಿಪಟ್ನ – ಪಡ್ಡಂದಡ್ಕ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಹಾಗೂ 2 ಕೋಟಿ ರೂ ವೆಚ್ಚದಲ್ಲಿ ಬೊಳ್ಳಾಜೆ -ಡೆಂಜೋಳಿ – ಗರ್ಡಾಡಿ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಯಿತು.
ಬೆಳ್ತಂಗಡಿ ನಗರ, ಮಚ್ಚಿನ, ಬಾರ್ಯ, ತೆಕ್ಕಾರು, ಬಂದಾರು, ಕೊಯ್ಯೂರು, ಬೆಳಾಲು, ಧರ್ಮಸ್ಥಳ, ಶಿಬಾಜೆ, ಹತ್ಯಡ್ಕ, ಕಳೆಂಜ, ನೆರಿಯ, ಮುಂಡಾಜೆ, ಮಿತ್ತಬಾಗಿಲು, ನಡ, ಉಜಿರೆ, ಕಳಿಯ ಗ್ರಾಮಗಳಲ್ಲೂ ವಿವಿಧ ಕಾಮಗಾರಿಗಳಿಗೆ ಇಂದು ಶಾಸಕ ಹರೀಶ್ ಪೂಂಜ ಶಿಲಾನ್ಯಾಸ ನೆರವೇರಿಸಲಿದ್ದಾರೆ.

error: Content is protected !!