ಬೆಳ್ತಂಗಡಿ, ಗಡಾಯಿಕಲ್ಲು ಹತ್ತಲು ಪ್ರಾರಂಭಿಸಿದ ಜ್ಯೋತಿ ರಾಜ್ ಯಾನೆ ಕೋತಿ ರಾಜ್

ಬೆಳ್ತಂಗಡಿ: ತಾಲೂಕಿನ ಗಡಾಯಿಕಲ್ಲನ್ನು ಹತ್ತಲು ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಆರಂಭಿಸಿದ್ದಾರೆ. ಇಂದು ಬೆಳಗ್ಗೆ (ಫೆ.12) ಚಂದ್ಕೂರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ದೇವಸ್ಥಾನದ ಮುಂಭಾಗದಿಂದ ಎರಡು ಕಿ.ಮೀ ನಡೆದುಕೊಂಡು ಹೋಗಿ ಗಡಾಯಿಕಲ್ಲು ಬುಡದಲ್ಲಿ 9.50 ಕ್ಕೆ ತೆಂಗಿನಕಾಯಿ ಹೊಡೆದು 1700 ಅಡಿ ಎತ್ತರದ ನರಸಿಂಹ ಗಡ ಹತ್ತಲು ಪ್ರಾರಂಭಿಸಿದ್ದಾರೆ. ವನ್ಯಜೀವಿ ಅರಣ್ಯ ವಿಭಾಗದಿಂದ ಅನುಮತಿ ಪಡೆದು ಉತ್ತರಾಭಿಮುಖವಾಗಿ ಕೈಗಳ ಸಹಾಯದಿಂದ ಗಡಾಯಿಕಲ್ಲು ಏರಲು ಆರಂಭಿಸಿದ್ದು ಸುರಕ್ಷತೆಯ ದೃಷ್ಟಿಯಿಂದ ಸೊಂಟಕ್ಕೆ ರೋಪ್ ಅಳವಡಿಸಿಕೊಂಡಿದ್ದಾರೆ

 

error: Content is protected !!