ಕಬಡ್ಡಿ ಆಡುತ್ತಿರುವಾಗಲೇ ಬಾಲಕಿ ಮೃತ್ಯು, ರೈಡಿಂಗ್ ತೆರಳಿದ್ದ ವೇಳೆ ಹೃದಯಾಘಾತ: ಕಾಲೇಜಿನ ಕ್ರೀಡೋತ್ಸವ ಸಂದರ್ಭದಲ್ಲಿ ನಡೆಯಿತು ದುರ್ಘಟನೆ..!

ಆನೇಕಲ್: ಕಬಡ್ಡಿ ಆಡುತ್ತಿದ್ದ ವೇಳೆ ವಿದ್ಯಾರ್ಥಿನಿಯೋರ್ವಳು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಅತ್ತಿಬೆಲೆಯ ಸೆಂಟ್ ಫಿಲೋಮಿನಾ ಶಾಲೆಯಲ್ಲಿ ಫೆ.08ರಂದು ಸಂಭವಿಸಿದೆ.

ಕಾಲೇಜಿನಲ್ಲಿ ಕ್ರೀಡಾ ಉತ್ಸವ ಆಚರಣೆಯ ಅಂಗವಾಗಿ ಮಹಿಳೆಯರ ತಂಡಕ್ಕೆ ಕಬಡ್ಡಿ ಪಂದ್ಯ ಆಯೋಜನೆ ಮಾಡಲಾಗಿತ್ತು. ಹೀಗಾಗಿ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸಂಗೀತ (19) ಕೂಡ ಕಬ್ಬಡಿ ತಂಡದಲ್ಲಿ ಪಾಲ್ಗೊಂಡು ಆಟ ಆಡುತ್ತಿದ್ದಳು. ಈಕೆ ರೈಡ್‌ಗೆ ಹೋಗಿದ್ದ ಸಂದರ್ಭದಲ್ಲಿ ಎದುರಾಳಿ ತಂಡದ ಆಟಗಾರರು ಹಿಡಿಯಲು ಹೋಗಿ ಆಕೆಯ ಮೇಲೆ ಮುಗಿಬಿದ್ದಿದ್ದಾರೆ. ಈ ವೇಳೆೆ ರೈಡರ್ ವಿದ್ಯಾರ್ಥಿನಿ ಸಂಗೀತಾಳಿಗೆ ಹೃದಯಾಘಾತವಾಗಿದೆ. ತಕ್ಷಣವೇ ಆಕೆಯನ್ನು ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೂ ಆಕೆ ಬದುಕುಳಿಯಲಿಲ್ಲ. ಆಸ್ಪತ್ರೆಯ ವೈದ್ಯರು ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.

 

error: Content is protected !!