ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಗಾಂಜಾ ಆರೋಪಿ ಚಿಕ್ಕಮಗಳೂರಿನ ಬಣಕಲ್‌ನಲ್ಲಿ ಆರೋಪಿಯನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು:

 

 

 

 

 

ಬೆಳ್ತಂಗಡಿ  : ಗಾಂಜಾ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಚಿಕ್ಕಮಗಳೂರಿನ ಬಣಕಲ್‌ನಲ್ಲಿ ಬೆಳ್ತಂಗಡಿ ಪೊಲೀಸರು
ಬಂಧಿಸಿದ್ದಾರೆ.

ಬೆಳ್ತಂಗಡಿ ಪೊಲೀಸ್ ಠಾಣಾ ಅಕ್ರ 73/18 ಕಲಂ. 8.(C) ಜೊತೆಗೆ 20(B) ಎನ್.ಡಿ.ಪಿ.ಎಸ್ ಆಕ್ಟ್ ಗಾಂಜಾ ಪ್ರಕರಣದಲ್ಲಿ ವಾರಂಟ್ A2 ಆರೋಪಿಯಾದ ಅಂಜುಮಖಾನ್(41) ಎಂಬಾತನು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಬಳಿಕ ಫೆ.4 ರಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಬಳಿಯಿಂದ ಬೆಳ್ತಂಗಡಿ ಪೊಲೀಸ್ ಉಪ ನಿರೀಕ್ಷಕರಾದ ಹರೀಶ್.ಎಮ್.ಆರ್ ಮತ್ತು ಅರ್ಜುನ್ ರವರ ನೇತೃತ್ವದಲ್ಲಿ ವೃಷಭ್ ಹಾಗೂ ಬಸವರಾಜ್ ರವರು ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

error: Content is protected !!