ಕೊಕ್ಕಡ ಮರಳು ಸಾಗಾಟ ಲಾರಿ- ಬೈಕ್ ನಡುವೆ ಅಪಘಾತ : ಬೈಕ್ ಸವಾರ ಗಂಭೀರ…!

 

 

 

ಬೆಳ್ತಂಗಡಿ:ಕೊಕ್ಕಡ ಸಮೀಪದ ಉಪ್ಪಾರಪಳಿಕೆ ಎಂಬಲ್ಲಿ ಮರಳು ಟಿಪ್ಪರ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ, ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಫೆ.01ರಂದು ಸಂಜೆ ನಡೆದಿದೆ.
ಗಾಯಗೊಂಡ ಬೈಕ್ ಸವಾರನನ್ನು ಪಟ್ರಮೆಯ ಸಿರಾಜುದ್ದೀನ್ (38) ಎಂದು ಗುರುತಿಸಲಾಗಿದ್ದು, ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿರಾಜುದ್ದೀನ್ ಬುಧವಾರ ಸಂಜೆ ಕೊಕ್ಕಡದಿಂದ ಉಪ್ಪಿನಂಗಡಿ ಹೋಗುವ ಸಂದರ್ಭ ಉಪ್ಪಿನಂಗಡಿ ಕಡೆಯಿಂದ ಕೊಕ್ಕಡದ ಕಡೆಗೆ ಬರುತ್ತಿದ್ದ ಮರಳು ತುಂಬಿದ ಟಿಪ್ಪರ್ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಅಪಘಾತಕ್ಕೆ ಟಿಪ್ಪರ್ ಚಾಲಕ ಅಶ್ರಫ್  ನಿರ್ಲಕ್ಷ್ಯ ಚಾಲನೆಯೇ  ಕಾರಣ ಎಂದು ತಿಳಿದು ಬಂದಿದೆ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!