ಸಮುದಾಯದ ಹೆಸರು ದುರುಪಯೋಗ ಆರೋಪ: ಮಲೆಕುಡಿಯ ಸಂಘದಿಂದ ಪತ್ರಿಕಾಗೋಷ್ಠಿಯಲ್ಲಿ ಆಕ್ಷೇಪ: ಶಾಸಕ ಹರೀಶ್ ಪೂಂಜ ವಿರುದ್ಧ ನಡೆಸಿದ ಪ್ರತಿಭಟನೆಗೆ ಅಸಮಾಧಾನ:

 

 

 

ಬೆಳ್ತಂಗಡಿ:ಜನವರಿ 30 ರಂದು ಬೆಳ್ತಂಗಡಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಲೆಕುಡಿಯ ಸಮುದಾಯದ ಹೆಸರನ್ನು ದುರುಪಯೋಗ ಮಾಡಿರುವುದಕ್ಕೆ ಮಲೆಕುಡಿಯ ಸಂಘ ಆಕ್ಷೇಪ ವ್ಯಕ್ತಪಡಿಸುತ್ತದೆ.ಎಂದು ಮಲೆಕುಡಿಯರ ಸಂಘ ದ.ಕ. ಜಿಲ್ಲಾ ಸಮಿತಿ ಅಧ್ಯಕ್ಷ ಹರೀಶ್ ಎಳನೀರು ಹೇಳಿದರು ಅವರು ಫೆ 01 ರಂದು ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಮಲೆಕುಡಿಯರ ಸಂಘದ ಮೂಲಕ ಬೆಳ್ತಂಗಡಿಯಲ್ಲಿ ಪ್ರತಿಭಟನೆ ನಡೆಸಿಲ್ಲ, ಮಲೆಕುಡಿಯ ಸಂಘವು ಎಲ್ಲಾ ರಾಜಕೀಯ ಪಕ್ಷಗಳಿಂದ ಸಮಾನಾಂತರವನ್ನು ಕಾಯ್ದುಕೊಂಡು ತನ್ನದೆ ಆದ ಗುರಿ ಉದ್ದೇಶ ಇಟ್ಟುಕೊಂಡು ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತದೆ. ಸವಣಾಲಿನ ಬೈರವಕಲ್ಲಿನ ದೈವ ಸ್ಥಾನಕ್ಕೆ ಸಂಬಂಧಿಸಿದಂತೆ ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಸಮುದಾಯ ಬಾಂಧವರನ್ನು ಒಟ್ಟುಗೂಡಿಸಿಕೊಂಡು ಹೋಗಲು ಮಲೆಕುಡಿಯ ಸಂಘ ಬದ್ದವಾಗಿದೆ. ಯಾವುದೇ ವಿಭಾಜಕ ಶಕ್ತಿಗಳು ಸಮುದಾಯದ ಮತ್ತು ಸಂಘಟನೆಯ ವಿಷಯದಲ್ಲಿ ಮೂಗು ತೂರಿಸಬಾರದು ಎಂಬ ಆಗ್ರಹವನ್ನು ಮಾಡುತ್ತೇವೆ ಎಂದರು ಪತ್ರಿಕಾಗೋಷ್ಠಿಯಲ್ಲಿ
ಕರ್ನಾಟಕ ರಾಜ್ಯ ಮಲೆಕುಡಿಯರ ಸಂಘ ಉಪಾಧ್ಯಕ್ಷೆ ವಸಂತಿ ನೆಲ್ಲಿಕಾರ್,
ತಾಲೂಕು ಸಮಿತಿ ಅಧ್ಯಕ್ಷ ಶಿವರಾಮ್ ಉಜಿರೆ,ಮಲೆಕುಡಿಯರ ಸಂಘ ಜಿಲ್ಲಾ ಸಮಿತಿ ವಕ್ತಾರ ಉಮಾನಾಥ್ ಧರ್ಮಸ್ಥಳ
ಉಪಸ್ಥಿತರಿದ್ದರು.

error: Content is protected !!