ಬೆಳ್ತಂಗಡಿ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಗರ್ಡಾಡಿಯ ತನ್ನ ಮನೆಯಲ್ಲಿ ಸಾರ್ವಜನಿಕರ ಮುಂದೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ
ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ತಾಲೂಕು ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲ ಹೇಳಿದ್ದಾರೆ ಈ ಬಗ್ಗೆ ಬೆಳ್ತಂಗಡಿ ಶ್ರೀ ಗುರನಾರಾಯಣ ಸ್ವಾಮಿ ಸಭಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು
ಬೆಳ್ತಂಗಡಿಯ ಶ್ರೀ ಬೈರವ, ಮೂಜಿಲ್ನಾಯ ಪುರುಷರಾಯ ದೈವಗಳ ಸೇವಾ ಟ್ರಸ್ಟ್, ಬೈರವಕಲ್ಲು ಸವಣಾಲು ಗ್ರಾಮ ಇದರ ವತಿಯಿಂದ ದೈವಸ್ಥಾನವು ಜೀರ್ಣೋದ್ಧಾರಗೊಳ್ಳುತ್ತಿರುವ ಹಿನ್ನಲೆ ಶಾಸಕ ಹರೀಶ್ ಪೂಂಜರ ಮೂಲಕ ಸರ್ಕಾರದ ಅನುದಾನ ಪಡೆಯುವ ಉದ್ದೇಶದಿಂದ ಹಾಗೂ ಮೂರು ವರ್ಷಗಳ ಹಿಂದೆ 14 ಲಕ್ಷ ರೂಪಾಯಿ ನೀಡುತ್ತೇನೆ , ಭರವಸೆ ಈಡೇರದ ಕಾರಣ ಇವೆಲ್ಲ ವಿಚಾರದ ಬಗ್ಗೆ ಮಾತನಾಡಲು ದೈವಗಳ ಸೇವಾ ಟ್ರಸ್ಟ್ ಇದರ ಪ್ರಧಾನ ಕಾರ್ಯದರ್ಶಿ ಆಗಿರುವ ನಾನು ಹಾಗೂ ಇತರರು ಶಾಸಕರ ಗರ್ಡಾಡಿ ಮನೆಗೆ ತೆರಳಿದ ಸಂದರ್ಭ ಯಾವುದೋ ವಿಚಾರಗಳನ್ನು ಕೆದಕಿ ಅವಮಾನ ಮಾಡಿದ್ದಾರೆ ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.ಒಂದು ವೇಳೆ ನ್ಯಾಯ ಸಿಗದಿದ್ದಲ್ಲಿ ಪೊಲೀಸ್ ಠಾಣೆ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗುತ್ತದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಟ್ರಸ್ಟ್ ನ ಗೌರವಾಧ್ಯಕ್ಷ ಮಹಾಬಲ ಮಲೆಕುಡಿಯ, ತಾ.ಪಂ ಮಾಜಿ ಸದಸ್ಯ ಜಯರಾಮ್ ಅಲಂಗಾರು, ಚೇತನ್, ಲಕ್ಷ್ಮಣ್ ಅಲಂಗಾಯಿ ಉಪಸ್ಥಿತರಿದ್ದರು.