ಬೆಳ್ತಂಗಡಿ : ಹೊಟೇಲಿನೊಳಗೆ ಆತ್ಮಹತ್ಯೆ ಮಾಡಿಕೊಂಡ ನೌಕರ:

 

 

 

 

 

ಬೆಳ್ತಂಗಡಿ : ಹೊಟೇಲ್ ಒಳಗಡೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ಬೆಳ್ತಂಗಡಿಯ ಸಂತೆಕಟ್ಟೆ ಸಮೀಪದ ಹೊಟೇಲಿನಲ್ಲಿ‌ ಅಡುಗೆ ಕೆಲಸ ಮಾಡುತಿದ್ದ ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ನಿವಾಸಿ ಜಗನ್ನಾಥ್ (48) ಅಡುಗೆ ಕೋಣೆಯಲ್ಲಿ ಜ.22 ರಂದು ಸಂಜೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜಗನ್ನಾಥ್  ಹೊಟೇಲಿನಲ್ಲಿಯೇ   ವಾಸವಾಗುತ್ತಿದ್ದು ಎರಡು ವಾರಕ್ಕೊಮ್ಮೆ ಮನೆಗೆ ಹೋಗಿ ಬರುತ್ತಿದ್ದರು.

ಇಂದು ಭಾನುವಾರವಾಗಿದ್ದ ಕಾರಣ ಹೊಟೇಲ್ ಗೆ ರಜೆ ಇದ್ದು ಸಂಜೆ ವೇಳೆ ಮಾಲೀಕರು ಜಗನ್ನಾಥ್ ಗೆ ಕರೆ ಮಾಡಿ ಸೋಮವಾರಕ್ಕೆ ಬೇಕಾಗುವ ಅಡುಗೆ ಸಾಮಾನು ತಂದಿಡಲು ಹೇಳಿದ್ದರು ಅದರಂತೆ ಸಾಮಾನು ತಂದು ನಂತರ ಏಕಾಏಕಿ ಆತ್ಮಹತ್ಯೆ ಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.

error: Content is protected !!