ಬೆಳ್ತಂಗಡಿ ಸೋಮವತಿ  ನದಿಯಲ್ಲಿ  ಯುವಕನ ಶವ ಪತ್ತೆ..

 

 

 

ಬೆಳ್ತಂಗಡಿ : ಯುವಕನೊಬ್ಬನ ಶವ ನದಿಯ ಕಿಂಡಿ ಅಣೆಕಟ್ಟಿನ ಸಮೀಪ ಕುಳಿತ ಸ್ಥಿತಿಯಲ್ಲಿ ಜ.10 ರಂದು ಸಂಜೆ ಪತ್ತೆಯಾದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಸೋಮವತಿ ನದಿ ಸಂಗತಿನಗರ ರಸ್ತೆಯ ಬದಿಯಲ್ಲಿರುವ ಕಿಂಡಿ ಅಣೆಕಟ್ಟಿನಲ್ಲಿ ಲಾಯಿಲ ಗ್ರಾಮದ ಅಯೋಧ್ಯನಗರದ ನಿವಾಸಿ ಕಿರಣ್ (27) ಶವ ಪತ್ತೆಯಾಗಿದೆ.

ಸ್ಥಳಕ್ಕೆ ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ಅರ್ಜುನ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಶವವನ್ನು ಶವಪರೀಕ್ಷೆ ಮಾಡಲು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳದಲ್ಲಿ ಲಾಯಿಲ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ್ ,ಸದಸ್ಯರಾದ ಅರವಿಂದ್ ಪೊಲೀಸರಿಗೆ ಸಹಕರಿಸಿದರು.

ಕಿರಣ್ ಸಾವನ್ನಪ್ಪಿರುವ ಕಾರಣವನ್ನು ಬೆಳ್ತಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

error: Content is protected !!