ಬಿಲ್ಲವರ ಮೇಲಿನ ದೌರ್ಜನ್ಯದ ವಿರುದ್ಧ ಹೋರಾಟ ಅವಶ್ಯ: ಬೆಳ್ತಂಗಡಿಯಲ್ಲಿ ಬಿಲ್ಲವ ಸಂಘಟನೆಗಳ ಸಮಾಲೋಚನಾ ಸಭೆ: ವಿಧಾನ ಸಭಾ ಚುನಾವಣೆ ರಕ್ಷಿತ್ ಶಿವರಾಂ ಅವಕಾಶಕ್ಕೆ ಒಲವು..? ಚುನಾವಣೆಗೆ ಸ್ಪರ್ಧೆ ಮಾಡಲ್ಲ ಎಂದು ಸ್ಪಷ್ಟ ಪಡಿಸಿದ ಮಾಜಿ ಶಾಸಕ ಕೆ‌. ವಸಂತ ಬಂಗೇರ..

ಬೆಳ್ತಂಗಡಿ: ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ (ರಿ.) ಬೆಳ್ತಂಗಡಿ, ಬಿಲ್ಲವ ಮಹಿಳಾ ವೇದಿಕೆ ಬೆಳ್ತಂಗಡಿ, ಯುವ ಬಿಲ್ಲವ ವೇದಿಕೆ ಬೆಳ್ತಂಗಡಿ, ಯುವವಾಹಿನಿ (ರಿ.) ಬೆಳ್ತಂಗಡಿ ಹಾಗೂ ವೇಣೂರು ಘಟಕ ತಾಲೂಕಿನ ಬಿಲ್ಲವ ಗ್ರಾಮ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಬಿಲ್ಲವ ಸಮಾಜದ ಮೇಲೆ ನಿರಂತರವಾಗಿ ನಡೆಯುವ ದೌರ್ಜನ್ಯದ ವಿರುದ್ಧ ಸಮಾಲೋಚನಾ ಸಭೆಯು ಜ .11ರಂದು
ಶ್ರೀ ಗುರುನಾರಾಯಣ ಸಭಾಭವನದ ಸಭಾಂಗಣದಲ್ಲಿ  ನಡೆಯಿತು.

ಬಿಲ್ಲವ ಸಮಾಜದ ಮೇಲೆ ಆಗುತ್ತಿರುವ ದೌರ್ಜನ್ಯದ ಬಗ್ಗೆ ಹೋರಾಟದ ಅವಶ್ಯಕತೆ ಇದೆ. ಮುಂದಿನ ಚುನಾವಣೆಯಲ್ಲಿ ಬಿಲ್ಲವರಿಗೆ ಅವಕಾಶ ನೀಡಬೇಕು ರಕ್ಷಿತ್ ಶಿವಾರಂಗೆ ಅವಕಾಶ ನೀಡಬೇಕೆಂದು ಸಂಘದ ಎಲ್ಲರೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಭೆಯಲ್ಲಿ ಸಂಜೀವ ಪೂಜಾರಿ ಕೊಡಂಗೆ ಬಂಗೇರ ನೀವು ಚುನಾವಣಾಗೆ ಸ್ಪರ್ಧಿಸಬೇಕು ಎಂದು ಕೇಳಿಕೊಂಡಾಗ ಅರ್ಥಿಕವಾಗಿ ತುಂಬಾ ಸಮಸ್ಯೆಯಲ್ಲಿ ಇರುವುದರಿಂದ ಯಾವುದೇ ಕಾರಣಕ್ಕೂ ಚುನಾವಣೆಗೆ ನಿಲ್ಲುವುದಿಲ್ಲ ಎಂಬುವುದನ್ನು ಬಂಗೇರ ಅವರು ಸ್ಪಷ್ಟ ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

error: Content is protected !!