ಮಧ್ಯರಾತ್ರಿ ಮಾರುತಿ ಒಮ್ನಿ ಕಾರಿನಲ್ಲಿ ಅಕ್ರಮ ಗೋಸಾಗಾಟ..!: ರೌಂಡ್ಸ್ ನಲ್ಲಿದ್ದ ಖಾಕಿ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಗೋಕಳ್ಳರು..! ಬೆಳ್ತಂಗಡಿಯ ಬಡಗಕಾರಂದೂರು ನಡಾಯಿ ನಮನ ಡಾಭಾ ಬಳಿ ಘಟನೆ

ಬೆಳ್ತಂಗಡಿ: ಬಡಗಕಾರಂದೂರು ಗ್ರಾಮದ ನಡಾಯಿ ನಮನ ಡಾಬಾ ಬಳಿ ಮಾರುತಿ ಒಮ್ನಿ ಕಾರಿನಲ್ಲಿ ಗೋಸಾಗಾಟ ಮಾಡುತ್ತಿದ್ದವರು ಜ.04ರಂದು ವೇಣೂರು ಪೊಲೀಸರ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಬೆಳಗ್ಗಿನ ಜಾವ 01.35ರ ವೇಳೆಗೆ ಮಾರುತಿ ಒಮ್ನಿ ಕಾರು ಬರುವುದನ್ನು ಕಂಡು ಪೊಲೀಸರು ತಡೆದು ನಿಲ್ಲಿಸಿ ಕಾರು ಪರಿಶೀಲಿಸಿದ್ದಾರೆ. ಈ ವೇಳೆ ಕಾರಿನಲ್ಲಿ ಚಾಲಕ ಹಾಗೂ ಇನ್ನಿಬ್ಬರು ಇದ್ದು, ಕಾರಿನಲ್ಲಿ 5 ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕೈಕಾಲು ಕಟ್ಟಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ. ಬಳಿಕ ಪೊಲೀಸರು 5 ಜನ ಆರೋಪಿತರುಗಳನ್ನು ವಶಕ್ಕೆ ಪಡೆದು ಅಕ್ರಮ ಸಾಗಾಟ ಮಾಡುತ್ತಿದ್ದ 5 ಜಾನುವಾರುಗಳನ್ನು ಹಾಗೂ ಅಕ್ರಮ ಸಾಗಾಟಕ್ಕೆ ಉಪಯೋಗಿಸಿದ ಮಾರುತಿ ಒಮ್ನಿ ಕಾರು ಮತ್ತು ದ್ವಿಚಕ್ರ ವಾಹನವನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ. ಸ್ವಾಧೀನ ಪಡಿಸಿದ ಜಾನುವಾರುಗಳ ಅಂದಾಜು ಮೌಲ್ಯ 15,000 ರೂ. ಹಾಗೂ ವಾಹನಗಳ ಅಂದಾಜು ಮೌಲ್ಯ 1,75,000 ರೂ. ಎಂದು ಅಂದಾಜಿಸಲಾಗಿದೆ.

ಆರೋಪಿತರನ್ನು ಕರಾಯ ಗ್ರಾಮದ ಜನತಾ ಕಾಲೋನಿಯ ತೌಸೀಫ್, (32), ಇರ್ಫಾನ್ (25), ಅನಾಸ್ (23,) ಪುತ್ತಿಲ ಗ್ರಾಮದ ಉಸ್ಮಾನ್, (55) , ವಳಾಲು ಗ್ರಾಮದ ಇಕ್ಬಾಲ್ (34) ಎಂದು ಗುರುತಿಸಲಾಗಿದ್ದು, ಐವರನ್ನೂ ಬಂಧಿಸಲಾಗಿದೆ.

error: Content is protected !!