ಸ್ಯಾಂಡಲ್ ವುಡ್ ಸಿನಿಮಾಕ್ಕಾಗಿ ಬಣ್ಣಹಚ್ಚಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಬೀಡಿನಲ್ಲಿ ಮೇಕಪ್ ಮಾಡಿಕೊಳ್ಳುತ್ತಿರುವ ಫೋಟೊ  ವೈರಲ್..!

 

ಧರ್ಮಸ್ಥಳ: ಇಲ್ಲಿವರೆಗೆ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ‌ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಸಿನಿಮಾವೊಂದರಲ್ಲಿ ನಟಿಸಲು ಬಣ್ಣ ಹಚ್ಚಿದ್ದಾರೆ. ಎಸ್.ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ‘ವೀರ ಕಂಬಳ’ ಎಂಬ ಸಿನಿಮಾದಲ್ಲಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಬೀಡಿನಲ್ಲಿ ಅವರು ಬಣ್ಣಹಚ್ಚುತ್ತಿದ್ದ ಫೋಟೊ ಫುಲ್ ವೈರಲ್ ಆಗಿದೆ.

ಸುಮಾರು 7 ವರ್ಷಗಳ ಕಾಲ ಸಂಶೋಧನೆ ನಡೆಸಿ ನಿರ್ಮಿಸಲಾಗುತ್ತಿರುವ ವೀರಕಂಬಳ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದ್ದು ಕಂಬಳವನ್ನೇ ಕೇಂದ್ರವನ್ನಾಗಿಟ್ಟುಕೊಂಡು ಸಿನಿಮಾ ತಯಾರಾಗುತ್ತಿದೆ.
ಈ ಚಿತ್ರ ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಹಿಂದಿ ಹಾಗೂ ತುಳು ಭಾಷೆಗಳಲ್ಲಿಯೂ ತೆರೆಗೆ ಬರಲಿದ್ದು,
ತುಳು ಭಾಷೆಯಲ್ಲಿ ‘ಬಿರ್ದ್‌ದ ಕಂಬಳ’ ಹೆಸರಿನಲ್ಲಿ
ಮೂಡಿ ಬರಲಿದೆ.

“ವೀರ ಕಂಬಳ” ಸಿನಿಮಾಕ್ಕೆ ಅರುಣ್ ರೈ ತೋಡಾರ್ ನಿರ್ಮಾಣದ ಸಿನಿಮಾ ಇದಾಗಿದ್ದು ಕಂಬಳದ ಕೋಣ ಓಡಿಸುವುದರಲ್ಲಿ ಪರಿಣಿತರಾಗಿರುವ, ಹೆಗ್ಗಳಿಕೆ ಪಡೆದಿರುವ ಶ್ರೀನಿವಾಸ್ ಗೌಡ ಹಾಗೂ ರಂಗಭೂಮಿ ಕಲಾವಿದ ಸ್ವರಾಜ್ ಶೆಟ್ಟಿ ಕಂಬಳದ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತುಳುನಾಡಿನ ಪ್ರಸಿದ್ಧ ರಂಗಭೂಮಿ ಕಲಾವಿದರ ಜೊತೆಗೆ
ಪ್ರಕಾಶ್ ರಾಜ್, ಆರ್ಮುಗ ರವಿಶಂಕರ್ ಮುಖ್ಯಪಾತ್ರದಲ್ಲಿ‌ ನಟಿಸುತ್ತಿದ್ದಾರೆ.

error: Content is protected !!