ಬೆಳ್ತಂಗಡಿ : ವಿವಿಧ ಜಿಲ್ಲೆಯಲ್ಲಿ ಅಗತ್ಯವಿರುವ ಕಡೆಗಳಲ್ಲಿ ಉಪವಿಭಾಗ ಮತ್ತು ಪಿಐ ಪೊಲೀಸ್ ಠಾಣೆ ಮಾಡಲು ಪೊಲೀಸ್ ಇಲಾಖೆಯೂ ರಾಜ್ಯ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಇದೀಗ ಆ ಪ್ರಸಾರವಾನೆಗೆ ರಾಜ್ಯ ಸರಕಾರ ಪ್ರಸ್ತಾವನೆಗಳನ್ನು ಎಲ್ಲಾ ಆಯಾಮಗಳಲ್ಲಿ ಪರಿಶೀಲನೆ ನಡೆಸಿ ಇದೀಗ ಅಧಿಕೃತ ಆದೇಶವನ್ನು ಪೊಲೀಸ್ ಇಲಾಖೆಗೆ ಹೊರಡಿಸಿದೆ. ಅದರಂತೆ ಬೆಳ್ತಂಗಡಿಗೆ ಉಪವಿಭಾಗ ಹಾಗೂ ಎರಡು ಪಿಐ ಪೊಲೀಸ್ ಠಾಣೆಯನ್ನು ಮಾಡಲು ಆದೇಶ ಹೊರಡಿಸಿದೆ.
2023ರ ಮೊದಲ ತಿಂಗಳಲ್ಲಿ ಪೊಲೀಸ್ ಇಲಾಖೆ ಬದಲಾವಣೆಯನ್ನು ಮಾಡಲಿದ್ದು, ಬೆಳ್ತಂಗಡಿಯ ಐದು ಪೊಲೀಸ್ ಠಾಣೆಗೆ ಒಂದು ಹೊಸ ಉಪವಿಭಾಗ ಪೊಲೀಸ್ ಠಾಣೆ (DYSP ಅಥವಾ ASP ಕಚೇರಿ) ಸ್ಥಾಪನೆಯಾಗಲಿದೆ. ಬೆಳ್ತಂಗಡಿ ಪೊಲೀಸ್ ಠಾಣೆ ಮತ್ತು ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಗೆ (ಪಿಐ) ಇನ್ಸ್ ಪೆಕ್ಟರ ದರ್ಜೆಯ ಪೊಲೀಸ್ ಠಾಣೆಯಾಗಲಿದ್ದು ಹಾಗೂ ವೇಣೂರು ಪೊಲೀಸ್ ಠಾಣೆ, ಪುಂಜಾಲಕಟ್ಟೆ ಪೊಲೀಸ್ ಠಾಣೆ , ಧರ್ಮಸ್ಥಳ ಪೊಲೀಸ್ ಠಾಣೆಯನ್ನು ಒಳಗೊಂಡ ಸರ್ಕಲ್ ಇನ್ಸ್ಪೆಕ್ಟರ್ ಪೊಲೀಸ್ ಠಾಣೆಯಾಗಲಿದೆ.
ಬೆಳ್ತಂಗಡಿಗೆ ಓರ್ವ ಡಿವೈಎಸ್ಪಿ ಮತ್ತು ಓರ್ವ ಇನ್ಸ್ಪೆಕ್ಟರ್ (ಪಿಐ) ಶೀಘ್ರದಲ್ಲಿ ನೇಮಕಗೊಳ್ಲಲಿದ್ದಾರೆ.