ಮಲೆಕುಡಿಯ ಸಮುದಾಯದ ಹಿರಿಯಜ್ಜಿ ನಿಧನ: 21 ಮೊಮ್ಮಕ್ಕಳನ್ನು ಅಗಲಿದ ಶತಾಯುಷಿ ಸಂಕಮ್ಮ..!

ಬೆಳ್ತಂಗಡಿ. ಮಲೆಕುಡಿಯ ಸಮುದಾಯದ ಹಿರಿಯಜ್ಜಿ, ನಾವೂರು ಗ್ರಾಮದ, ಮಂಜಳ ನಿವಾಸಿ ಸಂಕಮ್ಮ ಡಿ.28ರಂದು ಸ್ವಗೃಹದಲ್ಲಿ ನಿಧನರಾದರು.

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿ ಸೇರಿದಂತೆ ಇಡೀ ಮಲೆಕುಡಿಯ ಸಮುದಾಯದಲ್ಲಿಯೇ ಹಿರಿಯಜ್ಜಿ ಎಂಬ ಹೆಗ್ಗಳಿಕೆ ಇವರದಾಗಿದ್ದು 108 ವರ್ಷದಲ್ಲಿ ಶತಾಯುಷಿಯಾಗಿ ಕೊನೆಯುಸಿರೆಳೆದಿದ್ದಾರೆ.

4 ಗಂಡು ಮಕ್ಕಳಾದ ಗಿರಿಯಪ್ಪ ಮಲೆಕುಡಿಯ , ರುಕ್ಮಯ್ಯ ಮಲೆಕುಡಿಯ , ಡಾಕಯ್ಯ ಮಲೆಕುಡಿಯ , ನೋಣಯ್ಯ ಮಲೆಕುಡಿಯ ,3 ಹೆಣ್ಣು ಮಕ್ಕಳಾದ ಚಿನ್ನಮ್ಮ , ಸೇಸಮ್ಮ , ರತ್ನ ಮತ್ತು 21 ಮೊಮ್ಮಕ್ಕಳು , 6 ಜನ ಮರಿಮಕ್ಕಳು ಸೇರಿದಂತೆ ಅಪಾರ ಸಂಖ್ಯೆಯ ಬಂಧುಬಳಗವನ್ನು ಅಗಲಿದ್ದಾರೆ. ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲ ಮೃತರ ಮನೆಗೆ ತೆರಳಿ ಸಂತಾಪ ಸೂಚಿಸಿದ್ದಾರೆ.

error: Content is protected !!