ಪಿಲಿಪಂಜರ ಕ್ಷೇತ್ರದಲ್ಲಿ ಉಳ್ಳಾಲ್ತಿ ಪ್ರಧಾನ ದೈವ..! ಕಡೇಶಿವಾಲಯ ಸುಬ್ರಹ್ಮಣ್ಯ ಭಟ್ ಸಾರಥ್ಯದಲ್ಲಿ ನಡೆದ ಪ್ರಶ್ನಾ ಚಿಂತನೆ:

 

 

 

 

ಬೆಳ್ತಂಗಡಿ: ಲಾಯಿಲ, ಉಜಿರೆ, ಗಡಿ ಭಾಗದಲ್ಲಿ ಇರುವ ಪಿಲಿಪಂಜರ ಕ್ಷೇತ್ರದಲ್ಲಿ ಕಡೇಶಿವಾಲಯ ಪಚ್ಚಾಡಿಬೈಲು ಪಿ.  ಸುಬ್ರಹ್ಮಣ್ಯ ಭಟ್ ಅವರ ಸಾರಥ್ಯದಲ್ಲಿ ಡಿ 27 ರಂದು ಪ್ರಶ್ನಾಚಿಂತನೆ ನಡೆಯಿತು. ಕ್ಷೇತ್ರದಲ್ಲಿ ದೈವ ಸಾನಿಧ್ಯದ ಬಗ್ಗೆ ಉಳ್ಳಾಲ್ತಿ ಉಳ್ಳಾಕುಲು ಪ್ರಧಾನ ದೈವಗಳಾಗಿ ಕಂಡು ಬಂದಿದೆ. ಅದಲ್ಲದೆ ಸ್ಥಳದಲ್ಲಿ ಪಂಜುರ್ಲಿ, ಗುಳಿಗ ,ಮೈಸಂದಾಯ ದೈವಗಳ ಸಾನಿಧ್ಯವೂ ಇರುವ ಬಗ್ಗೆ ಗೋಚರವಾಗಿದೆ.ಈ ಸಂದರ್ಭದಲ್ಲಿ ಉಜಿರೆ ಜನಾರ್ಧನ ಸ್ವಾಮಿ ದೇವಸ್ಥಾನದ ಶರತ್ ಕೃಷ್ಣ ಪಡುವೆಟ್ನಾಯ, ಲಾಯಿಲ ಗುತ್ತಿನ ಚಿತ್ತರಂಜನ್ ಹೆಗ್ಡೆ, ಪಿಲಿಪಂಜರ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಂಜೀವ ಶೆಟ್ಟಿ ಕುಂಟಿನಿ, ಸೇರಿದಂತೆ ಸಮಿತಿಯ ಪದಾಧಿಕಾರಿಗಳು. ಗ್ರಾಮಸ್ಥರು ಉಪಸ್ಥಿತರಿದ್ದರು.

error: Content is protected !!