ಬೆಳಾಲು ಬಾವಿಗೆ ಬಿದ್ದ ಕಡವೆ, ರಕ್ಷಿಸಿ ಕಾಡಿಗೆ ಬಿಟ್ಟ ಇಲಾಖೆ..!:

 

 

ಬೆಳ್ತಂಗಡಿ:  ಬೆಳಾಲು ಸಮೀಪದ ಹಳೆಮಾಯ ಎಂಬಲ್ಲಿ‌ ಕಡವೆಯೊಂದು ಬಾವಿಗೆ ಬಿದ್ದಿರುವ ಘಟನೆ ಡಿ 24 ರಂದು ನಡೆದಿದೆ.
ಹಳೆಮಾಯಾ ಬಳಿಯ ಸೋಮು‌ ಎಂಬವರ ಬಾವಿಗೆ ಕಡವೆಯೊಂದು ಬಿದಿದ್ದು ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು. ಉಪ್ಪಿನಂಗಡಿ ಆರ್.ಎಫ್ ಓ ಜಯಪ್ರಕಾಶ್, ಅವರ ಮಾರ್ಗದರ್ಶನದಲ್ಲಿ‌ ದಡಂತಮಲೆ‌ ಶಾಖೆಯ ಡಿ. ಆರ್. ಎಫ್ ಒ ಲೋಕೇಶ್ ,ಗಸ್ತು ಅರಣ್ಯ ರಕ್ಷಕ ವಿನಯ್ ಚಂದ್ರ ಇವರು ಸುಮಾರು 3 ವರ್ಷ ಪ್ರಾಯದ ಕಡವೆಯನ್ನು ಮೇಲೆತ್ತಿ ಪ್ರಥಮ ಚಿಕಿತ್ಸೆ ನೀಡಿ ಕಾಡಿಗೆ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಸ್ಥಳೀಯರು ವಿಪತ್ತು ನಿರ್ವಹಣಾ ತಂಡಕ್ಕೆ ತಿಳಿಸಿದ್ದು ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೆನ್ನಲಾಗಿದೆ. ನಂತರ ಜೆಸಿಬಿ ಮೂಲಕ ಕಡವೆಯನ್ನು ರಕ್ಷಿಸುವ  ಕಾರ್ಯ ಮಾಡಲಾಗಿದೆ.

error: Content is protected !!