ಬೆಳ್ತಂಗಡಿ : ಹಿರಿಯ ದಲಿತ ನಾಯಕ ಪಿ.ಡೀಕಯ್ಯ ಅವರ ಸಾವು ಪ್ರಕರಣ ಡೀಕಯ್ಯ ತಾಯಿ ಮನೆಗೆ ಅಗಮಿಸಿದ ಸಿಐಡಿ ತಂಡ:

 

 

 

ಬೆಳ್ತಂಗಡಿ :ದಲಿತ ನಾಯಕ ಪಿ.ಡೀಕಯ್ಯ ಅನುಮಾಸ್ಪದ ಸಾವಿನ ಬಗ್ಗೆ ಸಿಐಡಿ ತನಿಖೆ ನಾಲ್ಕನೆ ದಿನ ಚುರುಕುಗೊಳಿಸಿದೆ.

ಡಿ.22 ರಂದು ಬೆಳಗ್ಗೆ ಬೆಂಗಳೂರಿನಿಂದ ಸಿಐಡಿಯ ಇನ್ಸ್ಪೆಕ್ಟರ್ ಶಿವರಾಜ್, ಡಿಟೆಕ್ಟಿವ್ ಸಬ್ ಇನ್ಸ್ಪೆಕ್ಟರ್ ಮಹೇಶ್ವರ್ ರೆಡ್ಡಿ , ಹೆಡ್ ಕಾನ್ಟೇಬಲ್ ಶ್ರೀನಿವಾಸ್ , ವೆಂಕಟೇಶ್ ತಂಡ ಬೆಳ್ತಂಗಡಿ ಪೊಲೀಸ್ ಠಾಣೆಗೆ ಅಗಮಿಸಿ ಸಬ್ ಇನ್ಸ್ಪೆಕ್ಟರ್ ನಂದ ಕುಮಾರ್ ಅವರಿಂದ ಪ್ರಾಥಮಿಕ ಮಾಹಿತಿ ಪಡೆದುಕೊಂಡು ಸಂಜೆ ಗರ್ಡಾಯಿಯಲ್ಲಿರುವ ಪಿ.ಡೀಕಯ್ಯ ಅವರು ಸಾವನ್ನಪ್ಪಿದ ಮನೆಗೆ ಮಂಗಳೂರಿನ ಎಫ್ಎಸ್ಎಲ್ ತಂಡದ ಜೊತೆ ಹೋಗಿ ತನಿಖೆ ನಡೆಸಿದ್ದರು ಬಳಿಕ ಡಿ.24 ರಂದು ಡೀಕಯ್ಯ ಅವರು ದಾಖಲಾಗಿದ್ದ ಮಣಿಪಾಲ KMC ಆಸ್ಪತ್ರೆಗೆ ಹೋಗಿ ಚಿಕಿತ್ಸೆ ನೀಡಿದ ಡಾಕ್ಟರ್ ಅವರಿಂದ ಮಾಹಿತಿ ಸಂಗ್ರಹಿಸಿದ್ದರು.

 

 

 

ಇದೀಗ ಡಿ.25 ಭಾನುವಾರ (ಇಂದು) ಸುಮಾರು ಮಧ್ಯಾಹ್ನ 2 ಗಂಟೆಗೆ ಕಾಣಿಯೂರು ಗ್ರಾಮದ ಪೊಯ್ಯದಲ್ಲಿರುವ ಡೀಕಯ್ಯ ಅವರ ತಾಯಿ ಮನೆಗೆ ಸಿಐಡಿ ಟೀಂ ಅಗಮಿಸಿದ್ದು , ದಫನ ಮಾಡಿದ ಸ್ಥಳಕ್ಕೆ ಭೇಟಿ ನೀಡಿ ನಂತರ ಮನೆಗೆ ಹೋಗಿ ತನಿಖೆ ನಡೆಸುತ್ತಿದ್ದಾರೆ ಈ ವೇಳೆ ಸುಮಾರು 20 ಮಂದಿಯಷ್ಟು ಕುಟುಂಬ ಸದಸ್ಯರು ಕೂಡ ಪೊಯ್ಯ ಮನೆಯಲ್ಲಿ ತನಿಖೆಯಲ್ಲಿ ಭಾಗಿಯಾಗಿದ್ದಾರೆ.

error: Content is protected !!