ಸುರತ್ಕಲ್ ಚೂರಿ ಇರಿದು ವ್ಯಕ್ತಿಯ ಹತ್ಯೆ ಪ್ರಕರಣ: ಸುರತ್ಕಲ್ ಸೇರಿದಂತೆ 4 ಕಡೆಗಳಲ್ಲಿ 144 ಸೆಕ್ಷನ್ ನಿಷೇದಾಜ್ಙೆ ಜಾರಿ: ಮದ್ಯ ಮಾರಾಟ ಇಂದಿನಿಂದ 2 ದಿನ ಬಂದ್..!

 

 

ಸುರತ್ಕಲ್: ಮಂಗಳೂರು ನಗರದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿ 24 ರಂದು ನಡೆದ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಎರಡು ದಿನ ನಿಷೇದಾಜ್ಙೆ ಜಾರಿಗೊಳಿಸಲಾಗಿದೆ.
ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ಸೂಕ್ಷ್ಮ ಪ್ರದೇಶಗಳಾದ ಸುರತ್ಕಲ್, ಬಜಪೆ, ಕಾವೂರು ಹಾಗೂ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕ್ಷುಬ್ದ ವಾತಾವರಣ ಉಂಟಾಗಿ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ದಕ್ಕೆಯಾಗುವ ಸಾಧ್ಯತೆಗಳಿರುವುದರಿಂದ ಡಿ25 ಬೆಳಿಗ್ಗೆ 6 ರಿಂದ 27 ರ ಬೆಳಿಗ್ಗೆ 6 ರವರೆಗೆ 144 ಸೆಕ್ಷನ್ ನಿಷೇದಾಜ್ಙೆ ಜಾರಿಗೊಳಿಸಲಾಗಿದೆ. ಅದಲ್ಲದೆ ಈ ಎಲ್ಲ ಪ್ರದೇಶಗಳಲ್ಲಿರುವ ಮದ್ಯದಂಗಡಿ ಹಾಗೂ ಮದ್ಯ ಮಾರಾಟವನ್ನು ಡಿ 25 ಬೆಳಿಗ್ಗೆ 10 ರಿಂದ ಡಿ 27 ಬೆಳಿಗ್ಗೆ 10 ಗಂಟೆಯವರೆಗೆ ಮುಚ್ಚುವಂತೆ ತಿಳಿಸಲಾಗಿದೆ .ಕೈಗಾರಿಕೆ ಹಾಗೂ ವಾಣಿಜ್ಯ ಸಂಕೀರ್ಣಗಳಲ್ಲಿ ಕರ್ತವ್ಯ ನಿರ್ವಹಿಸುವವರು ಡಿ25 ಹಾಗೂ 26 ರಂದು ಸಂಜೆ 6 ಗಂಟೆಯವರೆಗೆ ಮಾತ್ರ ಕರ್ತವ್ಯ ನಿರ್ವಹಿಸುವ ಬಗ್ಗೆಯೂ ತಿಳಿಸಲಾಗಿದೆ. ರಾತ್ರಿ ಹೊತ್ತು ಯಾರೂ ಕೂಡ ತಿರುಗಾಡದಂತೆ ಆದೇಶಿಸಲಾಗಿದೆ.

error: Content is protected !!