ಸೇನಾ ವಾಹನ ಕಮರಿಗೆ ಉರುಳಿ ಬಿದ್ದು 16 ಯೋಧರು ಹುತಾತ್ಮ:::

 

 

 

ಭಾರತ-ಚೀನಾ ಗಡಿಯ ಸಮೀಪ ಉತ್ತರ ಸಿಕ್ಕಿಂನಲ್ಲಿ ಭಾರಿ ದುರಂತ ನಡೆದಿದ್ದು, ಸೇನಾ ವಾಹನವೊಂದು ಕಮರಿಗೆ ಬಿದ್ದು 16 ಜನ ಯೋಧರು ಸಾವನ್ನಪ್ಪಿದ್ದಾರೆ. ಅಲ್ಲದೇ, ಇತರ ನಾಲ್ವರು ಗಾಯಗೊಂಡಿದ್ದಾರೆ.

 

 

 

ಸೇನಾ ವಾಹನವು 20 ಜನ ಯೋಧರೊಂದಿಗೆ ಗಡಿ ಭಾಗದ ಪೋಸ್ಟ್‌ಗಳತ್ತ ಸಾಗುತ್ತಿತ್ತು. ಈ ವೇಳೆ ಸ್ಕಿಡ್​ ಆಗಿ ನೂರಾರು ಅಡಿ ಆಳದ ಕಮರಿಗೆ ಬಿದ್ದು ದುರ್ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಉತ್ತರ ಬಂಗಾಳದ ಸೇನಾಸ್ಪತ್ರೆಗೆ ವಿಮಾನದ ಮೂಲಕ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.ಅಪಘಾತದ ಸ್ಥಳದಿಂದ ಎಲ್ಲ ಮೃತದೇಹಗಳನ್ನು ಹೊರತೆಗೆಯಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ನಾಲ್ವರು ಸೇನಾ ಸಿಬ್ಬಂದಿಯ ಸ್ಥಿತಿಗತಿ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.

error: Content is protected !!