ಶಾಲಾ ಬಸ್ – ಗೂಡ್ಸ್ ರಿಕ್ಷಾ ಮುಖಾ-ಮುಖಿ ಡಿಕ್ಕಿ..! ಓರ್ವ ಸಾವು : ಮೂವರು ಗಂಭೀರ..!: ಕೊಯ್ಯೂರಿನ ಮಲೆಬೆಟ್ಟು ಬಳಿ ಘಟನೆ

ಬೆಳ್ತಂಗಡಿ ಡಿ.24: ಗೂಡ್ಸ್ ರಿಕ್ಷಾ ಹಾಗೂ ಸ್ಕೂಲ್ ಬಸ್ ಮುಖಾ-ಮುಖಿ ಡಿಕ್ಕಿಯಾದ ಘಟನೆ ಇಂದು ಬೆಳಗ್ಗೆ ನಡೆದಿದೆ. ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದು, ಮೂವರು ಗಂಭೀರ ಗಾಯಗೊಂಡಿದ್ದಾರೆ.

ಶಾಲಾ ಬಸ್ ಕೊಯ್ಯೂರಿನಿಂದ ಶಾಲಾ ಮಕ್ಕಳನ್ನು ಉಜಿರೆಗೆ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಬೆಳ್ತಂಗಡಿಯಿಂದ ಕೊಯ್ಯೂರು ಕಡೆಗೆ ಹೋಗುತಿದ್ದ ಗೂಡ್ಸ್ ರಿಕ್ಷಾಗೆ ಮಲೆಬೆಟ್ಟು ವನದುರ್ಗ ದೇವಸ್ಥಾನದ ಬಳಿ ಬಸ್ ಡಿಕ್ಕಿ ಹೊಡೆದಿದ್ದು, ಈ ವೇಳೆ ರಿಕ್ಷಾದಲ್ಲಿದ್ದ ಕುವೆಟ್ಟು ಗ್ರಾಮದ ಪಿಲಿಚಾಮುಂಡಿ ನಿವಾಸಿ ಹನೀಫ್(48) , ಪಣಕಜೆ ನಿವಾಸಿ ಕೆ.ಮೊಹಮ್ಮದ್(57) ಗಾಯಗೊಂಡಿದ್ದು ಚಾಲಕ ಹನೀಫ್ ಗಂಭೀರ ಗಾಯಗೊಂಡಿದ್ದಾರೆ. ರಝಾಕ್(50) ಸಾವನ್ನಪ್ಪಿದ್ದಾರೆ.

error: Content is protected !!