ಮುಂಡಾಜೆ ಬಳಿ ಶಬರಿಮಲೆ ಯಾತ್ರಿಕರ ಟೆಂಪೊ ಅಪಘಾತ: ಮೂವರಿಗೆ ಗಂಭೀರ ಗಾಯ..!

ಬೆಳ್ತಂಗಡಿ : ಶಬರಿಮಲೆ ಯಾತ್ರೆಗೆ ತೆರಳುತಿದ್ದ ಯಾತ್ರಿಕರ ಟೆಂಪೊ ಮುಂಡಾಜೆ ಬಳಿ ಅಪಘಾತಕ್ಕೀಡಾದ ಘಟನೆ ಇಂದು ಬೆಳಗ್ಗೆ ನಡೆದಿದೆ.

ಬಳ್ಳಾರಿಯ ಜಿಲ್ಲೆಯ ಕೂಡ್ಲೂಗಿ ತಾಲೂಕಿನ 21 ಜನರು ಮಿನಿ ಬಸ್ ನಲ್ಲಿ‌ ಚಾರ್ಮಾಡಿ ಘಾಟ್ ಮೂಲಕ ಶಬರಿಮಲೆಗೆ ಪ್ರಯಾಣ ಮಾಡುತ್ತಿದ್ದರು. ಇಂದು ಬೆಳಗ್ಗೆ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಕಾಪು ಚಡವು ಉಳ್ಳಾಲ್ತಿ ಕಟ್ಟೆ ಬಳಿ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದ ಮಿನಿಬಸ್ ರಸ್ತೆ ಬದಿ ಚಲಿಸಿದೆ. ಈ ವೇಳೆ ಬಸ್ ನಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಇಬ್ಬರು ಎಸ್.ಡಿ.ಎಮ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, 15 ಜನ ಕಕ್ಕಿಂಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಥಳಕ್ಕೆ ಆರು ಆ್ಯಂಬುಲೆನ್ಸ್ ಆಗಮಿಸಿದ್ದು, ಬೆಳ್ತಂಗಡಿ ಸಂಚಾರಿ ಪೊಲೀಸರು ಹಾಗೂ ಸ್ಥಳೀಯರು ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

error: Content is protected !!