ಉತ್ತರ ಕರ್ನಾಟಕ ರಾಜ್ಯಕ್ಕೆ ವಿಜಯನಗರ ರಾಜಧಾನಿ: ಸಚಿವ ಆನಂದ್ ಸಿಂಗ್ ಹೇಳಿಕೆಗೆ ಕನ್ನಡ ಪರ ಸಂಘಟನೆಗಳಿಂದ ಆಕ್ರೋಶ: ಧರ್ಮಸ್ಥಳದಲ್ಲಿ ತಮ್ಮ ಹೇಳಿಕೆಗೆ ಉಲ್ಟಾ ಹೊಡೆದ ಸಚಿವ ಆನಂದ್ ಸಿಂಗ್:

 

 

ಬೆಳ್ತಂಗಡಿ  :ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ವಿಜಯನಗರ ಜಿಲ್ಲೆ ರಾಜಧಾನಿಯಾಗುವ ಸಾಧ್ಯತೆ ಇದೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿಕೆಯನ್ನು ಭಟ್ರಳ್ಳಿ ಆಂಜನೇಯ ದೇಗುಲದ ಮೈದಾನದ ಬಳಿ ಬಿಜೆಪಿ ಜಿಲ್ಲಾ ಭವನ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೇಳಿದ್ದರು ಈ ಬಗ್ಗೆ ಕನ್ನಡಪರ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು .ಡಿ 16 ರಂದು ಧರ್ಮಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ಉಲ್ಟಾ ಹೊಡೆದಿದ್ದಾರೆ.

 

 

ಮಾಧ್ಯಮದ ಸ್ನೇಹಿತರು ನನ್ನ ಹೇಳಿಕೆಯನ್ನು  ಸರಿಪಡಿಸಿಕೊಳ್ಳಬೇಕಾಗುತ್ತೆ ನಾನು ಹೇಳಿರುವುದು ಉತ್ತರ ಕರ್ನಾಟಕ ಹೊಸ ರಾಜ್ಯ ಅಗುತ್ತೆ ಅದಕ್ಕೆ ನಮ್ಮ ವಿಜಯ ನಗರ ರಾಜಧಾನಿ ಅಗುತ್ತೆ ಎಂದು ಹೇಳಿದ್ದಲ್ಲ . ಉತ್ತರ ಕರ್ನಾಟಕದಲ್ಲಿರುವ ಬಿಜೆಪಿ ಯಾವ ಯಾವ ಜಿಲ್ಲೆಗಳಲ್ಲಿರುತ್ತದೆ ಆ ನಮ್ಮ ಪಕ್ಷಕ್ಕೆ ರಾಜಧಾನಿ ಅಗುತ್ತೆ ಎಂದಿದ್ದೆ. ಯಾಕಂದ್ರೆ ಜಿಲ್ಲಾ ಕೇಂದ್ರ ಯಾವುದು ಅಗಬೇಕೆಂದರೆ ರಾಯಚೂರು , ಗುಲ್ಬರ್ಗ ,ಬೀದರ್ ನಮ್ಮ ಬಳ್ಳಾರಿ ,ಹೊಸಪೇಟೆ ಇದು ಉತ್ತರ ಕರ್ನಾಟಕ ಅಂದ್ರೆ ಕಲ್ಯಾಣ ಕರ್ನಾಟಕ. ಕಲ್ಯಾಣ ಕರ್ನಾಟಕಕ್ಕೆ ನಮ್ಮ ವಿಜಯ ನಗರ ಕ್ಷೇತ್ರ ಬಂದು ರಾಜಧಾನಿ ಅಗುತ್ತೆ ಎಂದು ಹೇಳಿರುವುದು. ಪ್ರತ್ಯೇಕ ರಾಜ್ಯ ಅಗುತ್ತೆ ಅನ್ನುವುದನ್ನು ದಯವಿಟ್ಟು ಮಾಧ್ಯಮದ ಮಿತ್ರರು ಸರಿಪಡಿಸಿಕೊಳ್ಳಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ ಎಂಬ  ಹೇಳಿಕೆಯನ್ನು ನೀಡಿದ್ದಾರೆ‌.

 

ಇದನ್ನೂ ಓದಿ:

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ವಿಜಯನಗರ ಜಿಲ್ಲೆ ಅದರ ರಾಜಧಾನಿ : ಸಚಿವ ಆನಂದ್​ ಸಿಂಗ್​​:

 

error: Content is protected !!