ಮತ್ತೆ-ಮತ್ತೆ ಒಂಟಿ ಸಲಗದ ದರ್ಶನ!: ಶಿಶಿಲ ಬಳಿ ರಬ್ಬರ್ ತೋಟದಲ್ಲಿ ಗಜರಾಜನ ಹೆಜ್ಜೆ..!

ಬೆಳ್ತಂಗಡಿ: ಡಿ.12 ರಂದು‌ ಬೆಳ್ಳಂ ಬೆಳಗ್ಗೆ ಅಣಿಯೂರು ಸೇತುವೆಯ ಕೆಳಭಾಗದಲ್ಲಿ ಒಂಟಿ ಸಲಗವೊಂದು ಪತ್ಯಕ್ಷವಾಗಿತ್ತು. ಇದೀಗ ಶಿಶಿಲದ ರಬ್ಬರ್ ತೋಟವೊಂದರಲ್ಲಿ ಆನೆ ನಡೆದುಕೊಂಡು ಹೋಗುತ್ತಿರುವ ದೃಶ್ಯವನ್ನು ಸ್ಥಳೀಯ ಮನೆಯವರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ಬೆಳ್ತಂಗಡಿ ತಾಲೂಕಿನ ಶಿಶಿಲದ ಗ್ರಾಮದ ಉಮಣ್ತಿಮಾರು ಎಂಬಲ್ಲಿ ಲಕ್ಷ್ಮಣ್ ಎಂಬವರಿಗೆ ಸೇರಿದ ತೋಟದಲ್ಲಿ ಡಿ.13 ರಂದು ಸಂಜೆ 6 ಗಂಟೆ ವೇಳೆಗೆ ತೋಟದಲ್ಲಿ ಆನೆ ನಡೆದುಕೊಂಡು ಹೋಗಿದೆ.


ತಾಲೂಕಿನ ಹಲವೆಡೆ ಒಂಟಿಸಲಗ ಕಾಣಿಸಿಕೊಳ್ಳುತ್ತಿದ್ದು ಜನ ಆತಂಕದಲ್ಲಿದ್ದಾರೆ. ಆದರೆ ಇಲ್ಲಿಯವರೆಗೆ ಜನತೆಗೆ ಯಾವುದೇ ಅಪಾಯ ಉಂಟುಮಾಡಿಲ್ಲ.‌

error: Content is protected !!