ದೈಹಿಕ ಶಿಕ್ಷಕ ಪ್ರಶಾಂತ್ ಪೂಜಾರಿ ಮುಡಿಗೆ ರಾಜ್ಯಮಟ್ಟದ ಅಕ್ಷರ ಸಿರಿ ಪ್ರಶಸ್ತಿ : ವಿವಿಧ ಸಂಘಗಳಿಂದ ಅಭಿನಂದನೆ

ಬಂದಾರು: ಬಂದಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕರಾದ ಪ್ರಶಾಂತ್ ಪೂಜಾರಿ ರಾಜ್ಯಮಟ್ಟದ ಅಕ್ಷರ ಸಿರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಈ ಹಿನ್ನೆಲೆ ನ.12ರಂದು ಬಂದಾರು ಒಕ್ಕೂಟ ಹಾಗೂ ಬಂದಾರು ಜನಜಾಗೃತಿ ಗ್ರಾಮ ಸಮಿತಿ ವತಿಯಿಂದ ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರಾದ   ಪ್ರೇಮ, ಜನಜಾಗೃತಿ ವೇದಿಕೆ ವಲಯಾಧ್ಯಕ್ಷರಾದ  ರುಕ್ಮಯ ಪೂಜಾರಿ, ಮೈರೋಳ್ತಡ್ಕ.ಬಂದಾರು ಒಕ್ಕೂಟ ಅಧ್ಯಕ್ಷರಾದ  ಶ್ರೀಲತಾ,ಮೈರೋಳ್ತಡ್ಕ ಒಕ್ಕೂಟ ಅಧ್ಯಕ್ಷರಾದ  ಕೃಷ್ಣಯ್ಯ ಆಚಾರ್ಯ,ಬಂದಾರು ಸೇವಾಪ್ರತಿನಿಧಿ ನಿರಂಜನ್ ಹಾಗೂ ಒಕ್ಕೂಟದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು

error: Content is protected !!