ಬೆಳ್ತಂಗಡಿ: ಮುಂದಿನ 2023ರಲ್ಲಿ ನಡೆಯಲಿರುವ ವಿಧಾನ ಸಭಾ ಚುನಾವಣೆಯ ಕಾವು ದಿನೇ ದಿನೇ ಹೆಚ್ಚಾಗುತ್ತಿದ್ದು ಈ ಮಧ್ಯೆ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಯಾರು ಆಯ್ಕೆಯಾಗಲಿದ್ದಾರೆ ಎಂಬುದೇ ಕುತೂಹಲಕಾರಿ ಸಂಗತಿಯಾಗಿತ್ತು. ಸದ್ಯ
ಸಂಭಾವ್ಯ ‘ಕೈ’ ಅಭ್ಯರ್ಥಿಗಳ ಪಟ್ಟಿ ಕಾಂಗ್ರೆಸ್ ಬಿಡುಗಡೆಗೊಳಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಬಾರಿ ಚುನಾವಣೆಯ ಅಭ್ಯರ್ಥಿಯಾಗಿ ಯುವಕರಿಗೆ ಅವಕಾಶ ನೀಡಲಾಗುವುದು ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ತಮ್ಮ ನಿಲುವು ವ್ಯಕ್ತಪಡಿಸಿದ್ರು. ಹೀಗಾಗಿ
ಪಕ್ಷವು ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ನೀಡಲು ತೀರ್ಮಾನಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ.
ಬಂಟ್ವಾಳ ವಿಧಾನಸಭಾ ಕ್ಷೇತ್ರ :ಮಾಜಿ ಸಚಿವ ರಮಾನಾಥ ರೈ,
ಪುತ್ತೂರು ವಿಧಾನ ಸಭಾ ಕ್ಷೇತ್ರ ಶಕುಂತಲಾ ಶೆಟ್ಟಿ ,
ಮೂಡಬಿದಿರೆ ವಿಧಾನಸಭಾ ಕ್ಷೇತ್ರ:
ಮಿಥುನ್ ರೈ, ರಾಜಶೇಖರ್ ಕೋಟ್ಯಾನ್,
ಸುಳ್ಯ ವಿಧಾನಸಭಾ ಕ್ಷೇತ್ರ : ಡಾ.ರಘು,
ಮಂಗಳೂರು ಉತ್ತರ : ಮೊಯಿನುದ್ದೀನ್ ಬಾವ, ಪ್ರತಿಭಾ ಕುಳಾಯಿ,
ಮಂಗಳೂರು: ಐವನ್ ಡಿಸೋಜ, ಜೆ.ಆರ್ ಲೊಬೋ ,
ಉಲ್ಲಾಳ: ಯು.ಟಿ ಖಾದರ್,
ಬೆಳ್ತಂಗಡಿ: ರಕ್ಷಿತ್ ಶಿವರಾಂ, ವಸಂತ ಬಂಗೇರ.
ಉಡುಪಿ ಜಿಲ್ಲೆಯಲ್ಲಿ ಕೃಷ್ಣ ಮೂರ್ತಿ ಆಚಾರ್, ದಿನೇಶ್ ಹೆಗಡೆ,
ಬೈಂದೂರು: ಗೋಪಾಲ ಪೂಜಾರಿ,
ಕುಂದಾಪುರ: ಪ್ರತಾಪ್ ಚಂದ್ರ ಶೆಟ್ಟಿ,
ಕಾಪು: ವಿನಯ್ ಕುಮಾರ್ ಸೊರಕೆ.
ಬೆಳ್ತಂಗಡಿಗೆ ರಕ್ಷಿತ್ ಶಿವರಾಂ…?
ಬಲ್ಲ ಮೂಲಗಳ ಪ್ರಕಾರ ಬೆಳ್ತಂಗಡಿ ಕ್ಷೇತ್ರದಿಂದ ರಕ್ಷಿತ್ ಶಿವರಾಂ ಅವರ ಹೆಸರು ಅಂತಿಮಗೊಳಿಸಲಾಗಿದೆ ಎಂಬ ಮಾತು ಕೇಳಿ ಬರುತಿದೆ. ಒಂದು ವೇಳೆ ಅವರ ಹೆಸರೇ ಅಂತಿಮಗೊಂಡಲ್ಲಿ ಭಿನ್ನಾಭಿಪ್ರಾಯಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಮಾತುಗಳೂ ಕೇಳಿಬರುತ್ತಿದೆ. ಈಗಾಗಲೇ ಕೆಪಿಸಿಸಿ ಸೂಚನೆಯಂತೆ ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ನೇತೃತ್ವದಲ್ಲಿ ಡಿ 11ರಂದು ನಡೆದ ಸಮಾಲೋಚನಾ ಸಭೆಯಲ್ಲಿ ಯಾರು ಅಭ್ಯರ್ಥಿಯಾದರೂ ಒಗ್ಗೂಡಿಕೊಂಡು ಪಕ್ಷದ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುವ ಬಗ್ಗೆ ಒಮ್ಮತ್ತದ ಅಭಿಪ್ರಾಯ ವ್ಯಕ್ತವಾಗಿದ್ದರೂ ಇತ್ತ ಹಿರಿಯ ಮುಖಂಡರುಗಳಾದ ಮಾಜಿ ಶಾಸಕ ವಸಂತ ಬಂಗೇರ ಹಾಗೂ ಗಂಗಾಧರ ಗೌಡ ಅವರುಗಳು ಮುಂದಿನ ವಿಧಾನ ಸಭಾ ಟಿಕೇಟ್ ನಮ್ಮಿಬ್ಬರಲ್ಲಿ ಒಬ್ಬರಿಗೆ ಎಂಬ ಬಗ್ಗೆ ನಿಲುವು ವ್ಯಕ್ತಪಡಿಸುತ್ತಿರುವುದಲ್ಲದೆ ಡಿ 17 ರಂದು ಸಿದ್ಧರಾಮಯ್ಯ ಕೂಡ ಬೆಳ್ತಂಗಡಿಗೆ ಬರುತ್ತಿರುವುದು ಇದೊಂದು ರೀತಿಯ ರಾಜಕೀಯ ಶಕ್ತಿ ಪ್ರದರ್ಶನಕ್ಕಾಗಿ ಗಂಗಾಧರ ಗೌಡರು ಕ್ರೀಡಾಕೂಟದ ಆಯೋಜನೆ ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಾಡುತಿದ್ದಾರೆ .ಅದಲ್ಲದೇ ಕಾರ್ಯಕ್ರಮದಲ್ಲಿ ರಕ್ಷಿತ್ ಶಿವರಾಂ ಭಾಗವಹಿಸಲಿದ್ದಾರೆಯೇ ಎಂಬುವುದು ಕೂಡ ಕೆಲವರಲ್ಲಿ ಕುತೂಹಲ ಕೆರಳಿಸಿದೆ. ಈ ಎಲ್ಲ ಬೆಳವಣಿಗೆಗಳು ಕಾರ್ಯಕರ್ತರ ಗೊಂದಲ ಹೆಚ್ಚಾಗುವಂತೆ ಮಾಡಿದೆ. ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಂಡು ಮುಂದಿನ ದಿನಗಳಲ್ಲಿ ಹೈಕಮಾಂಡ್ ಸೂಚಿಸಿದ ಅಭ್ಯರ್ಥಿ ಪರವಾಗಿ ಯಾವ ರೀತಿ ಬೆಳ್ತಂಗಡಿ ಕಾಂಗ್ರೆಸ್ ಮುಂದುವರಿಯಲಿದೆ ಎಂಬುವುದು ಕಾದು ನೋಡಬೇಕಾಗಿದೆ.