ಬೆಳ್ತಂಗಡಿ : ನ.12 ರಂದು ನಡ ಗ್ರಾಮದ ಕೇಳ್ತಾಜೆ ಬಳಿಯ ಕನ್ಯಾಡಿ 1 ಸೊರಕ್ಕೆ ಎಂಬಲ್ಲಿ ಅಪರಿಚಿತ ಶವವೊಂದು ಸುಟ್ಟ ರೀತಿಯಲ್ಲಿ ಕಂಡು ಬಂದಿತ್ತು. ಪೊಲೀಸ್ ತನಿಖೆಯಲ್ಲಿ ಇಂದು ಸುಟ್ಟ ಶವದ ಹಲವು ಗುರುತುಗಳು ಪತ್ತೆಯಾಗಿದೆ. ಶವದಲ್ಲಿ ಎರಡು ಕಾಲು ಉಂಗುರ , ಕೈಯಲ್ಲಿ ನಾಗರ ಹಾವಿನ ರೀತಿಯ ಉಂಗುರ, ಕೈ ಬಳೆಗಳು, ಸುಟ್ಟ ರೀತಿಯಲ್ಲಿ ಚೈನ್ ವಾಚ್, ಕುತ್ತಿಗೆಗೆ ಹಾಕುವ ಶಿವಲಿಂಗಧಾರಣೆ , ಬಟ್ಟೆಯ ಬಟನ್ , ಸುಟ್ಟು ಉಳಿದ ಸ್ವಲ್ಪ ಬಟ್ಟೆಗಳು, ತಲೆಗೆ ಹಾಕುವ ಕ್ಲಿಪ್ ಪತ್ತೆಯಾಗಿದೆ. ಸುಮಾರು 30-40 ವರ್ಷದ ಮಹಿಳೆಯ ಮೃತದೇಹ ಇದಾಗಿದೆ ಎಂದು ಡಾಕ್ಟರ್ ಮಹಾಬಲ ಶೆಟ್ಟಿ ಅವರು ಅಂದಾಜಿಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿಯೇ ಮಂಗಳೂರು ದೇರಳಕಟ್ಟೆ ಆಸ್ಪತ್ರೆಯ ಡಾ.ಅನಂತನ್ ,ಡಾ.ಆಶಿವಾರ್ಮ, ಪ್ರಕಾಶ್ ಶವಪರೀಕ್ಷೆ ಮಾಡಿದ್ದು, ನಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಶವಗಾರ ಮಂಚಕಲ್ಲಿನಲ್ಲಿ ದಫನ ಮಾಡಿದ್ದಾರೆ. ಮಂಗಳೂರು ಎಫ್ಎಸ್ಎಲ್ ನ ಡಾ.ವೀಣಾ ಮತ್ತು ತಂಡ ಹಾಗೂ ಮಂಗಳೂರು ದೇರಳಕಟ್ಟೆ(ಕೆ.ಎಸ್.ಹೆಗ್ಡೆ ಆಸ್ಪತ್ರೆಯ) ಡಾಕ್ಟರ್ ಮಹಾಬಲ ಶೆಟ್ಟಿ ಮತ್ತು ತಂಡ ತನಿಖೆಯಲ್ಲಿ ಭಾಗಿಯಾಗಿದ್ದರು. ಎಡಿಷನಲ್ ಎಸ್ಪಿ ಕುಮಾರ್ ಚಂದ್ರ , ಇನ್ಸ್ಪೆಕ್ಟರ್ ಶಿವಕುಮಾರ್, ಸಬ್ ಇನ್ಸ್ಪೆಕ್ಟರ್ ನಂದಕುಮಾರ್ , ಎಎಸ್ಐ ತಿಲಕ್ ರಾಜ್. ಬೆರಳಚ್ಚುಗಾರರಾದ ಸಚಿನ್ ರೈ, ಉದಯ ಭಾಗಿ, ಶ್ವಾನ ದಳ ವಿಭಾಗದ ಗಣೇಶ್ , ಸುಂದರ್ ಶೆಟ್ಟಿ ತನಿಖೆ ನಡೆಸಿದ್ದಾರೆ.