ಅಡಿಕೆ ಮರ ತಲೆಮೇಲೆ ಬಿದ್ದು ವೃದ್ಧ ಸಾವು: ಬೆಳ್ತಂಗಡಿ ಇಂದಬೆಟ್ಟು ಬಳಿ ಘಟನೆ:

 

 

ಬೆಳ್ತಂಗಡಿ : ಅಡಿಕೆ ಮರ ಕಡಿಯುತ್ತಿರುವ ಸಂದರ್ಭ ಆಕಸ್ಮಿಕವಾಗಿ ತಲೆ ಮೇಲೆ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಇಂದಬೆಟ್ಟು ಸಮೀಪ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಅಂಕೊತ್ಯಾರು ಎಂಬಲ್ಲಿ ವ್ಯಕ್ತಿಯೊಬ್ಬರ ತೋಟದಲ್ಲಿದ್ದ ಹಳೆ ಅಡಿಕೆ ಮರ ಕಡಿಯಲು ಮುಂಡಾಜೆಯ ವ್ಯಕ್ತಿಯೊಬ್ಬರಿಗೆ ಗುತ್ತಿಗೆ ನೀಡಿದ್ದು ಅದರಂತೆ ಇಂದು ಬೆಳಗ್ಗೆ ಸುಮಾರು 10:30 ರ ಸಮಯ ಅಡಿಕೆ ಮರ ಕಡಿಯುತ್ತಿದ್ದಾಗ ಮುಂಡಾಜೆ ಗ್ರಾಮದ ಮಂಜು ಶ್ರೀ ನಗರದ ಕುಂಟಾಲಪಲ್ಕೆ ನಿವಾಸಿ ಅಣ್ಣು ನಲ್ಕೆ(66) ತಲೆ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ಸ್ಥಳೀಯರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದರು ಆದರೆ ಚಿಕಿತ್ಸೆ ಫಲಿಸದೆ ಅಣ್ಣು ನಲ್ಕೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

error: Content is protected !!