ಗುರುವಾಯನಕೆರೆ ಕೆರೆಗೆ ಹಾರಿದ ರಿಕ್ಷಾ ಡ್ರೈವರ್ ಶವ ಪತ್ತೆ:

 

ಬೆಳ್ತಂಗಡಿ: ರಿಕ್ಷಾ ಚಾಲಕರೊಬ್ಬರು  ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಇದೀಗ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಗುರುವಾಯನಕೆರೆ ಸಮೀಪದ ಕುಲಾಲ ಮಂದಿರ ಸಮೀಪದ  ರಿಕ್ಷಾ ಡ್ರೈವರ್ ಪ್ರವೀಣ್ ಎಂಬವರ ಕೆಲವು ದಾಖಲೆಗಳು  ಕೆರೆ ಬಳಿ ಪತ್ತೆಯಾಗಿದ್ದು ಇದರಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿತ್ತು ಈ ಬಗ್ಗೆ ಅಗ್ನಿಶಾಮಕ ದಳ  ಹಾಗೂ   ಬೆಳಾಲು ವಿಪತ್ತು ನಿರ್ವಹಣಾ ತಂಡದವರು ಬೆಳಗ್ಗಿನಿಂದ ಕೆರೆಯಲ್ಲಿ ಶೋಧ  ಶೋಧ ಕಾರ್ಯ ನಡೆಸುತಿದ್ದು ಇದೀಗ ಮೃತ ದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಇನ್ನಷ್ಟೆ ತಿಳಿದು ಬರಬೇಕಾಗಿದೆ.

 

error: Content is protected !!