ಯಕ್ಷಗಾನದ ಹಿರಿಯ ಕಲಾವಿದ ಮಾಜಿ ಶಾಸಕ ಕುಂಬ್ಲೆ ಸುಂದರ್ ರಾವ್ ಇನ್ನಿಲ್ಲ:

 

 

ಮಂಗಳೂರು :ಹಿರಿಯ ಯಕ್ಷಗಾನ ಕಲಾವಿದ ಮಾಜಿ ಶಾಸಕರಾದ ಕುಂಬ್ಲೆ ಸುಂದರ ರಾವ್ (88) ನಿಧನ ಹೊಂದಿದ್ದಾರೆ.
ಯಕ್ಷಗಾನ ಮತ್ತು ತಾಳ ಮದ್ದಲೆ ಕ್ಷೇತ್ರದ ಅಪ್ರತಿಮ ಕಲಾವಿದರಾಗಿ . ತನ್ನ ಪ್ರಾಸಬದ್ದ ಮಾತುಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿದ್ದರು. ಭರತಾಗಮನದ ಭರತ, ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಗೋವಿಂದ ದೀಕ್ಷಿತ, ಕರ್ಣಾರ್ಜುನದ ಕರ್ಣ ಮುಂತಾದ ಪಾತ್ರಗಳನ್ನು ವಿಭಿನ್ನ ರೀತಿಯಲ್ಲಿ ನಿರ್ವಹಿಸಿದವರು.ಅಪಾರ ಅಭಿಮಾನಿಗಳನ್ನು ಹೊಂದಿದ ಇವರು ಕುಂಬ್ಲೆ ಎಂದೇ ಪ್ರಸಿದ್ದರಾಗಿದ್ದರು.

error: Content is protected !!