ಬೆಳ್ತಂಗಡಿ : ಸ್ಯಾಟಲೈಟ್ ರಿಂಗಣಿಸಿದ ಅರಣ್ಯದಲ್ಲಿ ಆ ರಾತ್ರಿ ನಿಗೂಢ ಶಬ್ದ ಸ್ಪೋಟಕ ಮಾಹಿತಿಯನ್ನು ಪೊಲೀಸರ ಮುಂದೆ ಬಿಚ್ಚಿಟ್ಟ ವೃದ್ಧೆ

 

 

 

 

 

ಬೆಳ್ತಂಗಡಿ : ಮಂಗಳೂರು ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಟೋಟದ ಬಳಿಕ ಪೊಲೀಸ್ ತನಿಖೆಯಲ್ಲಿ ಹಲವು ಆತಂಕಕಾರಿ‌ ವಿಚಾರಗಳು ಬೆಳಕಿಗೆ ಬರುತ್ತಿದೆ.

ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಟೋಟಿಸುವ‌ ಮುನ್ನಾ ದಿನ ಬೆಳ್ತಂಗಡಿಯ ಬೆಂದ್ರಾಳ ರಕ್ಷಿತಾರಣ್ಯದಲ್ಲಿ ಸಾಟಲೈಟ್ ಫೋನ್ ಹೋಗಿರುವ ಮಾಹಿತಿ ಹಿನ್ನಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದು ಈ ವೇಳೆ ಇನ್ನೊಂದು ಸ್ಪೋಟಕ ವಿಚಾರ ತಿಳಿದು ಬಂದಿದೆ.

ಘಟನೆಗೆ ಸಂಬಂದಿಸಿದಂತೆ ನಿನ್ನೆ ಧರ್ಮಸ್ಥಳ ಪಿಎಸ್ಐ ಅನಿಲ್ ಕುಮಾರ್ ತಂಡ ಬಾರೆಮನೆಯ ನಿವಾಸಿ ಚೆಲುವಮ್ಮ(60)ರವರನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕಾಡಿನಲ್ಲಿ ನಿಗೂಢ ಶಬ್ದ ಕೇಳಿರುವ ಬಗ್ಗೆ ಇವರು ಮಾಹಿತಿ ನೀಡಿದ್ದಾರೆ.

ಕಳೆದ ಏಂಟು ದಿನದ ಹಿಂದೆ ಎಂದು ಕೇಳದ ನಿಗೂಢ ಸ್ಟೋಟದ ಶಬ್ದ ಕೇಳಿಬಂದಿದೆ. ಮಗ ನಾನು ಮಲಗಿದ್ದೇವು. ಸುಮಾರು ರಾತ್ರಿ 11 ಗಂಟೆಗೆ ಭಾರಿ ದೊಡ್ಡ ಶಬ್ದ ಬಂತು. ಒಮ್ಮೆಲೇ ಮನೆ ಅಲುಗಾಡಿದಂತಾಯಿತು ಈ ವಿಷಯವನ್ನು ಮಗನಾದ ಮೋಹನನಿಗೆ ತಿಳಿಸಿದೆ ಅವನು ಗಾಡ ನಿದ್ರೆಯಲ್ಲಿದ್ದ. ನಮ್ಮ ಕಡೆ ಆನೆ ಜಾಸ್ತಿ ಬರುತ್ತಿದೆ. ಅದಕ್ಕೆ ಪಟಾಕಿ ಸಿಡಿಸಿ ಓಡಿಸುತ್ತಾರೆ ಆದ್ರೆ ಈ ಹಿಂದೆ ಎಂದು ಆ ರೀತಿಯ ದೊಡ್ಡ ಶಬ್ದ ಕೇಳಿಸಿಲ್ಲ ಇದುವೇ ಮೊದಲು ಇಷ್ಟು ದೊಡ್ಡದರಲ್ಲಿ ಶಬ್ದ ಕೇಳಿಸಿದ್ದು. ಮೊನ್ನೆ ಮಂಗಳೂರಲ್ಲಿ ಬಾಂಬ್ ಸ್ಪೋಟ ನಡೆದಿದೆ ಸಾಟಲೈಟ್ ಕರೆ ಹೋಗಿದೆ ಅಂತ ಮಗ ಹೇಳುತ್ತಿದ್ದ ಅದಲ್ಲದೆ ಟಿವಿಯಲ್ಲಿ ಬರುತ್ತಿದೆ ಅದರ ಬಗ್ಗೆ ನನಗೆ ಏನೂ ಜಾಸ್ತಿ ಗೊತ್ತಿಲ್ಲ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಚೆಲುವಮ್ಮನ ಹೇಳಿಕೆಯಂತೆ ಧರ್ಮಸ್ಥಳ ಪೊಲೀಸರು ಸುಮಾರು ಐದು ಕಿಮೀ ರಕ್ಷಿತಾರಣ್ಯದೊಳಗೆ ಪರಿಶೀಲನೆ ನಡೆಸಿದ್ದು ಯಾವುದೇ ಸ್ಪೋಟಕಗಳು ಅಥವಾ ಕುರುಹುಗಳು ಪತ್ತೆಯಾಗಿಲ್ಲ.

error: Content is protected !!