10 ದಿನದಲ್ಲಿ 15 ಅಪಘಾತ..! ಪ್ರಯಾಣಿಕರಿಗೆ ಮರಣ ಕೂಪದಂತೆ ಪರಿಣಮಿಸಿದ ಪೆರಿಯಶಾಂತಿ ರಾಜ್ಯ ಹೆದ್ದಾರಿ: ರಸ್ತೆ ಬದಿಯ ಅನಧಿಕೃತ ಅಂಗಡಿಗಳೇ ಅಪಘಾತಕ್ಕೆ ಕಾರಣ..!?:ಮಾಹಿತಿ ಇದ್ದರೂ ಅಧಿಕಾರಿಗಳು ಮೌನ: ಸಾರ್ವಜನಿಕರು ಗರಂ..!

ಬೆಳ್ತಂಗಡಿ: ಧರ್ಮಸ್ಥಳ – ಪೆರಿಯಶಾಂತಿ ರಸ್ತೆಯಲ್ಲಿ ಅತ್ಯಧಿಕ ವಾಹನ ದಟ್ಟನೆ ದಿನಂಪ್ರತಿ ಹೆಚ್ಚಾಗುತ್ತಿದೆ. ಪ್ರಸಿದ್ಧ ಪುಣ್ಯಕ್ಷೇತ್ರ ಧರ್ಮಸ್ಥಳಕ್ಕೆ ಹೊರಗಿನ ರಾಜ್ಯದಿಂದಲೂ ಸಾವಿರಾರೂ ಭಕ್ತರು, ಪ್ರವಾಸಿಗರು ಪ್ರತೀ ದಿನ ಆಗಮಿಸುತ್ತಾರೆ. ಧರ್ಮಸ್ಥಳದಿಂದ ರಾಜಧಾನಿ ಬೆಂಗಳೂರು ಸಂಪರ್ಕಿಸುವ ರಾಜ್ಯ ಹೆದ್ದಾರಿ ಇದಾಗಿದ್ದು, ಪ್ರಯಾಣಿಕರಿಗೆ ಮಾತ್ರ ಈ ರಸ್ತೆ ಮರಣ ಕೂಪದಂತೆ ಪರಿಣಮಿಸಿದೆ. ಈ ರಸ್ತೆಯಲ್ಲಿ ಸಂಚರಿಸುವುದೇ ಅಪಾಯವೆನಿಸಿದೆ. ಕಾರಣ, ಕಳೆದ 15 ದಿನದಲ್ಲಿ 10ಕ್ಕಿಂತಲೂ ಅಧಿಕ ವಾಹನ ಅವಘಡ ಇಲ್ಲಿ ಸಂಭವಿಸಿದೆ. ನಿನ್ನೆ ರಾತ್ರಿಯೂ ಬಸ್ಸ್ – ಬೊಲೆರೊ ವಾಹನ ಡಿಕ್ಕಿಯಾಗಿ ಒಬ್ಬರು ಸಾವನ್ನಪ್ಪಿದರಲ್ಲದೇ 7 ಜನರಿಗೆ ಗಾಯಗಳಾಗಿವೆ.

ಇಲ್ಲಿ ನಡೆಯುವ ಅಪಘಾತಕ್ಕೆ ರಸ್ತೆ ಬದಿಯಲ್ಲಿರುವ ಅನಧಿಕೃತ ಅಂಗಡಿಗಳೇ ಕಾರಣ ಎಂದು ಸಾರ್ವಜನಕರು ಆರೋಪಿಸುತ್ತಿದ್ದಾರೆ. ಧರ್ಮಸ್ಥಳದಿಂದ ಪೆರಿಯಶಾಂತಿವರೆಗೆ ಹಲವಾರು ಅನಧಿಕೃತ ಗೂಡಂಗಡಿಗಳು ಇವೆ. ಇದರಿಂದಾಗಿ ವಾಹನ ಸಂಚಾರಕ್ಕೆ ತೊಡಕ್ಕುಂಟಾಗುತ್ತಿದೆ. ದಿನಂಪ್ರತಿ ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಂಚಾರಿಸುತ್ತವೆ. ಈ ಅಂಗಡಿಗಳಿAದಾಗಿ ಕೆಲವರು ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸಿ ಖರೀದಿಗಾಗಿ ಹೋಗುತ್ತಾರೆ. ಇದರಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಅಲ್ಲದೇ ಕೆಲವು ಕಡೆಗಳಲ್ಲಿ ಚರಂಡಿ ಕೂಡ ಅಪಾಯವನ್ನುಂಟು ಮಾಡುತ್ತಿವೆ. ಈ ಬಗ್ಗೆ ಇಲಾಖೆಗಳಿಗೆ ಗೊತ್ತಿದ್ದರೂ ಏನೂ ಗೊತ್ತಿಲ್ಲದಂತೆ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಸಾರ್ವಜನಿಕರು ಅಸಾಮಾಧಾನ ವ್ಯಕ್ತಪಡಿಸಿದ್ದಾರೆ.

error: Content is protected !!