ಮುಂಡಾಜೆ ಬೈಕ್ ಅಪಘಾತ ಸವಾರ ಸಾವು

 

 

 

ಬೆಳ್ತಂಗಡಿ; ಬೈಕ್ ಸ್ಕಿಡ್ ಆಗಿ ಬಿದ್ದು ಯುವಕನೊಬ್ಬ ಸಾವನ್ನಪ್ಪಿದ ಘಟನೆ ಮುಂಡಾಜೆ ಬಳಿ ಬುಧವಾರ ರಾತ್ರಿ ನಡೆದಿದೆ.

ಮುಂಡಾಜೆ ಗ್ರಾಮದ ದುರ್ಗಾಪರಮೇಶ್ವರೀ ದೇವಸ್ಥಾನದ ಪಕ್ಕದ ತಿರುವು ರಸ್ತೆಯಲ್ಲಿ ಬೈಕ್ ಸ್ಕಿಡ್ ಆಗಿ ಸವಾರ, ಅಣಿಯೂರಿನ ಪ್ರದೀಪ ಗೌಡ (22) ಎಂಬವರು ಮೃತಪಟ್ಟ ದುರ್ದೈವಿ ಎಂದು ತಿಳಿದು ಬಂದಿದೆ.

ಅಣಿಯೂರಿನ ನೋಣಯ್ಯ‌ ಗೌಡ ಎಂಬವರ ಪುತ್ರರಾಗಿರುವ ಪ್ರದೀಪ ಅವರು ಸಂಬಂಧಿಗಳ ಮನೆಯಲ್ಲಿ ಇರುವ ಶುಭ ಕಾರ್ಯದ ನಿಮಿತ್ತ ಅವರ ಮನೆಗೆ ತೆರಳುತ್ತಿದ್ದರು ಎಂದು ಪ್ರಾಥಮಿಕ ಮಾಹಿತಿ ಲಭಿಸಿದೆ.

ಅಪಘಾತವಾದ ರಸ್ತೆಯು ಅಪಾಯಕಾರಿ ವಲಯವಾಗಿದ್ದು ಹಿಂದೆ ಕೂಡಾ ಇಲ್ಲಿ ಅಪಘಾತ ಮತ್ತು ಪ್ರಾಣ ಹಾನಿ ಸಂಭವಿಸಿದೆ. ಪ್ರದೀಪ ಅವರು ಚಲಾಯಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಕಲ್ಲಿನ‌ಕಂಬಕ್ಕೆ ಡಿಕ್ಕಿಹೊಡೆದು ಗಂಭೀರ ಗಾಯಗೊಂಡಿದ್ದರು.
ತಕ್ಷಣ ಸ್ಥಳೀಯರು ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸುವ ಯತ್ನ ನಡೆಸಿದರಾದರೂ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

error: Content is protected !!