ಶಿಲಾನ್ಯಾಸದ ಮರುಕ್ಷಣವೇ ₹ 2.5 ಕೋಟಿ ವೆಚ್ಚದ ಪೆರ್ಲ ಮುಂಡತ್ತೋಡಿ ರಸ್ತೆ ಕಾಮಗಾರಿ ಪ್ರಾರಂಭ :

 

 

ಉಜಿರೆ:  ಕಳೆದ ಹಲವಾರು ವರ್ಷಗಳಿಂದ ಉಜಿರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೆರ್ಲ ಮುಂಡತ್ತೋಡಿ ರಸ್ತೆ ತೀರಾ ಹದೆಗೆಟ್ಟಿದ್ದು ಕಳೆದ ಒಂದು ವರುಷಗಳ ಹಿಂದೆ ಶಾಸಕ ಹರೀಶ್ ಪೂಂಜ ಅವರು ಅಭಿವೃದ್ಧಿ ಪಡಿಸಲು ಅನುದಾನ ಬಿಡುಗಡೆಗೊಳಿಸಿದರೂ ಮಳೆ ಹಾಗೂ ತಾಂತ್ರಿಕ ಕಾರಣಗಳಿಂದ ರಸ್ತೆ ಅಭಿವೃದ್ಧಿ ಕೆಲಸ ಆಗಿರಲಿಲ್ಲ.

 

 

ಅದರೆ ಇದೀಗ ಈ ರಸ್ತೆ ಅಭಿವೃದ್ಧಿಗಾಗಿ ಶಾಸಕರು ರೂ 2.5 ಕೋ ಅನುದಾನದ ಮೂಲಕ ಕಾಮಗಾರಿ ನಡೆಸಲು ಶಿಲಾನ್ಯಾಸವನ್ನು ನ 06 ರಂದು ನೆರವೇರಿಸಿದರು. ಶಿಲಾನ್ಯಾಸ ನೆರವೇರಿಸಿದ ತಕ್ಷಣವೇ ಕಾಮಗಾರಿ ಪ್ರಾರಂಭವಾಗಿದ್ದು  ಆ ಭಾಗದ ಜನರ  ಸಂತಸವನ್ನು ಇಮ್ಮಡಿಗೊಳಿಸಿದೆ.

error: Content is protected !!