ಆಟವಾಡುತ್ತಿರುವಾಗ ಬಿದ್ದು ಬಾಲಕನ ತಲೆಗೆ ತೀವ್ರ ಗಾಯ..! ರಕ್ತಸೋರುತ್ತಿದ್ದರೂ ವಿದ್ಯಾರ್ಥಿಗೆ ಪ್ರಥಮ ಚಿಕಿತ್ಸೆ ನೀಡದ ಶಿಕ್ಷಕರು..! ವಿದ್ಯಾರ್ಥಿಗಳಿಂದಲೇ ಪ್ರಥಮ ಚಿಕಿತ್ಸೆ : ವಿಡಿಯೋ ವೈರಲ್

 

 

 

 

ಬೆಳ್ತಂಗಡಿ: ಆಟವಾಡುತ್ತಿದ್ದ ಬಾಲಕನೋರ್ವ ಜಾರಿ ಬಿದ್ದು ತಲೆಯ ಹಿಂಬದಿಗೆ ತೀವ್ರ ಗಾಯವಾಗಿದ್ದರೂ
ಶಿಕ್ಷಕರು ಪ್ರಥಮ ಚಿಕಿತ್ಸೆ ನೀಡದೆ, ಮಕ್ಕಳೇ ಚಿಕಿತ್ಸೆ ನೀಡಿರುವ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ತೋಟತ್ತಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು ನಾಲ್ಕನೇ ತರಗತಿಯ ಬಾಲಕನ ತಲೆಗೆ ಗಾಯವಾಗಿ ರಕ್ತ ನಿಲ್ಲದೆ ಮುಖ,ಕುತ್ತಿಗೆ ಭಾಗದವರೆಗೂ ಹರಿಯುತ್ತಿದ್ದರೂ ಶಿಕ್ಷಕರು ಮಾತ್ರ ಯಾರೂ ಬಾಲಕನಿಗೆ ಪ್ರಥಮ ಚಿಕಿತ್ಸೆ ನೀಡದೆ ಆಸ್ಪತ್ರೆಗೂ ಕರೆದೊಯ್ಯದೆ ನಿರ್ಲಕ್ಷ್ಯ ತೋರಿದ್ದಾರೆ. ಅಲ್ಲದೆ ಶಾಲೆಯ ಮಕ್ಕಳಿಂದಲೇ ಪ್ರಥಮ ಚಿಕಿತ್ಸೆ ಮಾಡಿಸಿರುವ ವಿಡಿಯೋ ಕೂಡ ವೈರಲ್ ಆಗಿದೆ. ಬಳಿಕ ಸ್ಥಳೀಯರೇ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸಧ್ಯ‌‌ ಬಾಲಕ ಆರೋಗ್ಯವಾಗಿದ್ದಾನೆ.

ಘಟನೆಯ ಬಗ್ಗೆ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಹಾಗೂ ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ಸಭೆ ನಡೆದಿದ್ದು ಮುಂದೆ ಇಂತಹ ಘಟನೆ ಮರುಕಳಿಸದಂತೆ ನಿರ್ಣಯ ಕೈಗೊಳ್ಳಲಾಗಿದೆ. ಅಲ್ಲದೆ ಸೋಮವಾರ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.

error: Content is protected !!