ಯಕ್ಷ ಧ್ರುವ ಪಟ್ಲ ಪೌಂಡೇಶನ್ ಬೆಳ್ತಂಗಡಿ ಘಟಕ: ಯಕ್ಷ ಸಂಭ್ರಮ ದ ಆಮಂತ್ರಣ ಪತ್ರಿಕೆ  ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ  ಬಿಡುಗಡೆ

 

 

 

ಬೆಳ್ತಂಗಡಿ : ಯಕ್ಷ ಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಇದರ ಬೆಳ್ತಂಗಡಿ ಘಟಕದ ವತಿಯಿಂದ ನವೆಂಬರ್ 19ರ ಶನಿವಾರದಂದು ಉಜಿರೆ ಶ್ರೀ ಜನಾರ್ದನಸ್ವಾಮಿ ದೇವಸ್ಥಾನದ ರಥ ಬೀದಿಯಲ್ಲಿ ನಡೆಯಲಿರುವ *ಯಕ್ಷ ಸಂಭ್ರಮ- 2022* ರ ಆಮಂತ್ರಣ ಪತ್ರಿಕೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.‌ವೀರೇಂದ್ರ ಹೆಗ್ಗಡೆಯವರು ಗುರುವಾರ ಸಂಜೆ ಹೆಗ್ಗಡೆಯವರ ಬೀಡಿನಲ್ಲಿ ಬಿಡುಗಡೆಗೊಳಿಸಿ, ಶುಭ ಹಾರೈಸಿದರು.

 

ಬಳಿಕ ಕ್ಷೇತ್ರದ ಡಿ. ಹರ್ಷೇಂದ್ರ ಕುಮಾರ್ ಅವರನ್ನು ಭೇಟಿ ಮಾಡಿ ಅವರಿಗೆ ಆಮಂತ್ರಣ ಪತ್ರಿಕೆ ನೀಡಲಾಯಿತು.
ಈ ಸಂದರ್ಭ ಬೆಳ್ತಂಗಡಿ ಘಟಕದ ಗೌರವ ಸಲಹೆಗಾರ ಭುಜಬಲಿ ಧರ್ಮಸ್ಥಳ, ಬೆಳ್ತಂಗಡಿ ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ ಲಾಯಿಲ, ಪ್ರ. ಕಾರ್ಯದರ್ಶಿ ಶಿತಿಕಂಠ ಭಟ್ ಉಜಿರೆ, ಉಪಾಧ್ಯಕ್ಷರಾದ ಗಣೇಶ್ ಶಿರ್ಲಾಲು, ಮುರಳಿಕೃಷ್ಣ ಆಚಾರ್ಯ, ಉಮೇಶ್ ಕುಲಾಲ್ ಗುರುವಾಯನಕೆರೆ, ಜತೆಕಾರ್ಯದರ್ಶಿಗಳಾದ ಭುವನೇಶ್ ಗೇರುಕಟ್ಟೆ, ಗಿರೀಶ್ ಶೆಟ್ಟಿ ಗೇರುಕಟ್ಟೆ, ಕೋಶಾಧಿಕಾರಿ ಆದರ್ಶ್ ಜೈನ್ ಗುರುವಾಯನಕೆರೆ, ಸಂಚಾಲಕ ಕಿರಣ್ ಕುಮಾರ್ ಶೆಟ್ಟಿ, ಸಲಹೆಗಾರರಾದ ವಸಂತ ಸುವರ್ಣ ಲಾಯಿಲ, ಧರಣೇಂದ್ರ ಜೈನ್, ಹೇಮಂತ್ ಕುಮಾರ್ ಯರ್ಡೂರು, ವೆಂಕಟರಮಣ ಶೆಟ್ಟಿ ಉಜಿರೆ, ಸದಸ್ಯರಾದ ಜಗದೀಶ್ ಕನ್ನಾಜೆ, ನಿರಂಜನ ಶೆಟ್ಟಿ ಮೊದಲಾದವರು ಇದ್ದರು.

error: Content is protected !!