ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ತಲೆಮರೆಸಿಕೊಂಡ ಪ್ರಮುಖ ನಾಲ್ವರು ಆರೋಪಿಗಳು: ಕೊಲೆಗಡುಕರ ಸುಳಿವು ನೀಡಿದವರಿಗೆ ಲಕ್ಷ ಬಹುಮಾನ

ಸುಳ್ಯ: ಜುಲೈ 26ರಂದು ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ
ದುಷ್ಕರ್ಮಿಗಳು ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ಕೊಲೆಗೈದಿದ್ದು, ಪ್ರಕರಣ ಸಂಬಂಧ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಪ್ರಕರಣವು ರಾಷ್ಟ್ರೀಯ ತನಿಖಾದಳದ ಕೈಯಲ್ಲಿದ್ದು ಈಗಾಗ್ಲೆ ಪೊಲೀಸರು 10 ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು‌ಪಡಿಸಿದ್ದಾರೆ. ಆದರೆ ಪ್ರಕರಣದ ಪ್ರಮುಖ ನಾಲ್ಕು ಆರೋಪಿಗಳು ಮಾತ್ರ ಇನ್ನೂ ಪತ್ತೆಯಾಗಿಲ್ಲ. ಹೀಗಾಗಿ ಆರೋಪಿಗಳ ಸುಳಿವು ನೀಡಿದವರಿಗೆ ಲಕ್ಷ ಬಹುಮಾನ ನೀಡುವುದಾಗಿ
ಎನ್ ಐ ಎ ಘೋಷಿಸಿದೆ

ಪ್ರಮುಖ ಆರೋಪಿಗಳಾದ ಬೆಳ್ಳಾರೆಯ ಮಹಮ್ಮದ್ ಮುಸ್ತಾಫಾ ಮತ್ತು ಮಡಿಕೇರಿಯ ತುಫೈಲ್ ಬಗ್ಗೆ ಸುಳಿವು ನೀಡಿದರೆ ತಲಾ 5 ಲಕ್ಷ ರೂ. ಕೊಲೆಗೆ ಸಹಕಾರ ನೀಡಿದ ಸುಳ್ಯದ ಉಮ್ಮರ್ ಫಾರೂಕ್ ಹಾಗೂ ಬೆಳ್ಳಾರೆಯ ಅಬೂಬಕ್ಕರ್ ಸಿದ್ದಿಕ್ ‌ಬಗ್ಗೆ ಮಾಹಿತಿ ನೀಡಿದರೆ ತಲಾ 2 ಲಕ್ಷ ಬಹುಮಾನ ನೀಡಲಾಗುವುದು ಎಂದು ತಿಳಿಸಿದೆ.


ಆರೋಪಿಗಳ ಬಗ್ಗೆ ಮಾಹಿತಿ ನೀಡಿದವರಿಗೆ ಬಹುಮಾನ ನೀಡುವುದರ ಜೊತೆಗೆ ಮಾಹಿತಿದಾರರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು. ಮಾಹಿತಿದಾರರು info.blr.nia@gov.in ಅಥವಾ ದೂರವಾಣಿ ಸಂಖ್ಯೆ 080-29510900/8904241100 ಅಥವಾ ಪೊಲೀಸ್ ಅಧೀಕ್ಷಕರು, ರಾಷ್ಟ್ರೀಯ ತನಿಖಾ ದಳ (ಎನ್​ಐಎ), 8ನೇ ಮಹಡಿ, ಸರ್. ಎಂ ವಿಶ್ವೇಶ್ವರಯ್ಯ ಕೇಂದ್ರೀಯ ಸದನ, ದೊಮ್ಮಲೂರು, ಬೆಂಗಳೂರು 560071 ಈ ವಿಳಾಸವನ್ನು ಸಂಪರ್ಕಿಸುವಂತೆ ತನಿಖಾ ಸಂಸ್ಥೆ
ವಿನಂತಿಸಿದೆ.

error: Content is protected !!